ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ತಿಂಗಳಲ್ಲಿ 800 ಶಿಶುಗಳ ಜನನ- ಮಂಗ್ಳೂರಿನ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆ ಇತಿಹಾಸದಲ್ಲೇ ದಾಖಲೆ

ಮಂಗಳೂರು: ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ತಿಂಗಳೊಂದರಲ್ಲೇ ಸುಮಾರು 800 ಶಿಶುಗಳು ಜನನವಾಗಿದೆ. ಈ ಮೂಲಕ ದಾಖಲೆ ನಿರ್ಮಿಸಿದೆ.

ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಪ್ರತಿ ತಿಂಗಳು 400ರಿಂದ 450 ಮಕ್ಕಳ ಜನನವಾಗುತಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಸುಮಾರು 600 ಶಿಶುಗಳು ಜನಿಸಿದ್ದವು. ಆದರೆ ಅಕ್ಟೋಬರ್ ತಿಂಗಳಿನಲ್ಲಿ ಸುಮಾರು 800 ಶಿಶುಗಳು ಜನಿಸಿದ್ದು ವಿಶೇಷವಾಗಿದೆ. ಈ ಪೈಕಿ 379 ಸಿಸೇರಿಯನ್ ಹೆರಿಗೆಯಾಗಿದ್ರೆ, ಇನ್ನುಳಿದ ಎಲ್ಲವೂ ನಾರ್ಮಲ್ ಡೆಲಿವರಿ ಎಂಬುದು ಸಿಹಿ ಸುದ್ದಿ.

ಕೇವಲ ಒಂದೇ ತಿಂಗಳಿನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಿಶುಗಳ ಜನನವಾಗಿರುವುದು ಆಸ್ಪತ್ರೆಯ ಇತಿಹಾಸದಲ್ಲೇ ಇದೇ ಮೊದಲು. ಲೇಡಿಗೋಶನ್ ಆಸ್ಪತ್ರೆ ಸರ್ಕಾರಿ ಹೆರಿಗೆ ಆಸ್ಪತ್ರೆಯಾಗಿದ್ದರೂ, ಸಹ ಇಲ್ಲಿ ಸಿಗುವ ಸೇವೆ ಬೇರೆ ಯಾವುದೇ ಖಾಸಗಿ ಆಸ್ಪತ್ರೆಗಿಂತ ಕಡಿಮೆಯೇನಿಲ್ಲ. ಹೀಗಾಗಿ ಮಂಗಳೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗರ್ಭಿಣಿಯರು ಇಲ್ಲಿಗೆ ಬಂದು ಹೆರಿಗೆ ಮಾಡಿಸಿಕೊಳ್ಳುತ್ತಾರೆ.

Edited By : Vijay Kumar
Kshetra Samachara

Kshetra Samachara

19/11/2020 07:32 am

Cinque Terre

8.06 K

Cinque Terre

2

ಸಂಬಂಧಿತ ಸುದ್ದಿ