ಮುಲ್ಕಿ: ಭಾರತ ಸರಕಾರ ನೆಹರು ಯುವ ಕೇಂದ್ರ , ಮಂಗಳೂರು, ಹಳೆಯಂಗಡಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮತ್ತು ಮಹಿಳಾ ಮಂಡಲ ಆಶ್ರಯದಲ್ಲಿ ಕೋವಿಡ್ - 19 ಜಾಗೃತಿ ಕಾರ್ಯಕ್ರಮ ಭಾನುವಾರ ಮಂಡಲದ ಸಭಾಂಗಣದಲ್ಲಿ ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ , ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ ಸಹಕಾರದೊಂದಿಗೆ ನಡೆಯಿತು.
ಅಧ್ಯಕ್ಷತೆಯನ್ನು ಪೇಪರ್ ಸೀಡ್ ಸಂಸ್ಥೆ ಸ್ಥಾಪಕ ನಿತಿನ್ ವಾಸ್ ವಹಿಸಿ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ದೇಶ ಕೊರೊನಾ ಮುಕ್ತವಾಗಲು ಜಾಗೃತಿ ಕಾರ್ಯಕ್ರಮ ಮತ್ತಷ್ಟು ನಡೆಸಬೇಕಾಗಿದೆ ಎಂದು ಯುವತಿ ಮತ್ತು ಮಹಿಳಾ ಮಂಡಲದ ಕಾರ್ಯವೈಖರಿ ಶ್ಲಾಘಿಸಿದರು.
ಶ್ರೀ ವಿದ್ಯಾವಿನಾಯಕ ಯುವಕ ಮಂಡಲ ಸಲಹಾ ಸಮಿತಿ ಅಧ್ಯಕ್ಷ ಸದಾಶಿವ ಅಂಚನ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಬಳ್ಕುಂಜೆ ಸರಕಾರಿ ಆಯುರ್ವೇದ ಚಿಕಿತ್ಸಾಲಯ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಶೋಭಾರಾಣಿ ಕೋವಿಡ್ -19 ಬಗ್ಗೆ ಮಾಹಿತಿ ನೀಡಿದರು.
ಯುವತಿ ಮಂಡಲದ ಅಧ್ಯಕ್ಷೆ ದಿವ್ಯಶ್ರೀ ಕೋಟ್ಯಾನ್ ಸ್ವಾಗತಿಸಿದರು. ಮಹಿಳಾ ಮಂಡಲ ಕೋಶಾಧಿಕಾರಿ ರಾಜೇಶ್ವರಿ ಅತಿಥಿಗಳನ್ನು ಪರಿಚಯಿಸಿದರು.
ಮಹಿಳಾ ಮಂಡಲ ಅಧ್ಯಕ್ಷೆ ರೇಷ್ಮಾ ವಂದಿಸಿದರು. ಕಾರ್ಯದರ್ಶಿ ಪ್ರೇಮಲತಾ ಯೋಗೀಶ್ ನಿರೂಪಿಸಿದರು.
Kshetra Samachara
02/11/2020 03:12 pm