ಬಂಟ್ವಾಳ: ಕರೋನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೊರೋನ ವೈರಸ್‍ಹರಡುವಿಕೆಯನ್ನು ತಡೆಯಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಬೇಕು ಎನ್ನುವ ಕಾಳಜಿಯೆಾಂದಿಗೆ ಬಂಟ್ವಾಳ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ ಸಹಯೋಗದೊಂದಿಗೆ ಕೋವಿಡ್-19 ಜನಾಂದೋಲನ ಕಾರ್ಯಕ್ರಮ ನಡೆಯಿತು.
ಕೋವಿಡ್19 ಬಗ್ಗೆ ಜಾಗೃತಿ ಮೂಡಿಸುವ ಸಂಚಾರಿ ಆಟೋಗೆ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಅಧ್ಯ ಕ್ಷರಾದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ ಸಿ ಮಹಮ್ಮದ್‍ಇಮ್ತಿಯಾಜ್‍ಅಹಮ್ಮದ್, ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ ಸಿ ರಮ್ಯ ಎಚ್.ಅರ್, ಹಸಿರುನಿಶಾನೆ ತೋರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಹಾಗೂ ವಕೀಲರು, ನ್ಯಾಯಾಲಯದ ಸಿಬ್ಬಂದಿ ವರ್ಗದವರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ನೀಡಿದ ಕರಪತ್ರಗಳನ್ನು ಬಂಟ್ವಾಳ ಪಟ್ಟಣ, ಹಾಗೂ ಜನಸಂದಣಿ ಇರುವ ಪ್ರದೇಶದಗಳಾದ ಮಾರುಕಟ್ಟೆ ಬಸ್ಸು ತಂಗುದಾಣಗಳಲ್ಲಿ ಮಾಸ್ಕ್ ಗಳನ್ನು ಉಚಿತವಾಗಿ ವಿತರಣೆ ಮಾಡುವ ಮೂಲಕ ಜನ ಜಾಗೃತಿ ಮೂಡಿಸಿದರು.
ಸೋಂಕು ತಡೆಗಟ್ಟಲು ಸರಳ ಮಾರ್ಗಗಳಾದ ಮಖಕವಚ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಪದೇಪದೇ ಕೈ ತೊಳೆಯುವುದು, ಅಸ್ವಚ್ಚತಾ ಸ್ಧಳಗಳನ್ನು ಮುಟ್ಟದಿರುವುದು, ಸಾರ್ವಜನಿಕ ಸ್ಧಳಗಳಲ್ಲಿ ಉಗುಳದಿರುವುದು ಸೇರಿದತೆ ಮತ್ತಿತರೆ ಸೂಚನೆಗಳನ್ನು ಪಾಲಿಸಿದಲ್ಲಿ ಕೊರೋನ ಸೋಂಕಿನಿಂದ ದೂರವಾಗಲು ಸಾಧ್ಯವಾಗುತ್ತದೆ ಎಂಬ ಬಗ್ಗೆ ಬಿ.ಸಿ ರೋಡ್, ಕೈಕಂಬ, ಬಂಟ್ವಾಳ ಪೇಟೆಗಳಲ್ಲಿ ಆಟೋದಲ್ಲಿ ದ್ವನಿವರ್ಧಕದ ಮೂಲಕ ಆಡಿಯೋ ಪ್ರಸಾರ ಮಾಡಿ ಜನ ಜಾಗೃತಿ ಕೈಗೊಳ್ಳಲಾಯಿತು.
Kshetra Samachara
19/10/2020 04:04 pm