ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ.ಕ ಜಿಲ್ಲೆಯಲ್ಲಿ ಬಿಯರ್ ಮಾರಾಟ ಶೇ.50 ರಷ್ಟು ಇಳಿಕೆ!- ಯಾಕೆ ಗೊತ್ತಾ?

ಮಂಗಳೂರು: ಕೋವಿಡ್-19 ಗುಣಲಕ್ಷಣಗಳಲ್ಲಿ ಶೀತವೂ ಒಂದಾಗಿದ್ದು, ಇದು ಬಿಯರ್‌ ಮಾರಾಟದ ಮೇಲೆ ಭಾರೀ ಪರಿಣಾಮ ಬೀರಿದೆ.

ಅನೇಕರು ಶೀತ ಬರದಂತೆ ಮುಂಜಾಗ್ರತೆ ಹಿನ್ನೆಲೆ ಬೀಯರ್, ತಂಪು ಪಾನೀಯಗಳಿಂದ ದೂರ ಉಳಿದಿದ್ದಾರೆ. ಪರಿಣಾಮ ಕಳೆದ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 93,610 ಕೇಸ್‌ ಬಿಯರ್‌ ಮಾರಾಟವಾಗಿದ್ದರೆ, ಈ ವರ್ಷ 50,828 ಕೇಸ್‌ಗೆ ಇಳಿಕೆ ಕಂಡಿದೆ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಯರ್ ಮಾರಾಟದಲ್ಲಿ ಶೇ.50 ರಷ್ಟು ಇಳಿಕೆ ಕಂಡು ಬಂದಿದೆ.

‘ಬಿಯರ್‌ ಸೇವನೆಯಿಂದ ಶೀತ ಬರುವ ಭೀತಿ ಆರಂಭವಾಗಿದ್ದು, ಇದರಿಂದ ತಲೆನೋವು, ಗಂಟಲು ಕಿರಿಕಿರಿಯೂ ಆರಂಭವಾಗಬಹುದು ಎನ್ನುವ ಆತಂಕವೂ ಜನರಲ್ಲಿದೆ. ಇವೆಲ್ಲವೂ ಕೊರೊನಾ ಲಕ್ಷಣಗಳಾಗಿದ್ದರಿಂದ ಅನಗತ್ಯ ಕಿರಿಕಿರಿ ಮಾಡಿಕೊಳ್ಳುವುದು ಬೇಡ ಎನ್ನುವ ನಿರ್ಧಾರಕ್ಕೆ ಜನರು ಬಂದಂತಿದೆ. ಇದರಿಂದಾಗಿ ಬಿಯರ್‌ ಮಾರಾಟದಲ್ಲಿ ಇಳಿಕೆಯಾಗಿದೆ’ ಎಂದು ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ.

‘ಎಣ್ಣೆ ಪ್ರಿಯರು ಮುಂಜಾಗ್ರತಾ ಕ್ರಮವಾಗಿ ಬಿಯರ್‌ ಬದಲು ಮದ್ಯ ಸೇವನೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಅಷ್ಟೇ ಅಲ್ಲದೆ ತಂಪು ಪಾನೀಯಗಳಿಗಿಂತ ಬಿಸಿ ಪದಾರ್ಥಗಳ ಸೇವನೆಗೆ ಮುಂದಾಗಿದ್ದಾರೆ' ಎಂದು ಬಾರ್‌ ಮಾಲೀಕರು ಹೇಳುತ್ತಾರೆ.

Edited By : Vijay Kumar
Kshetra Samachara

Kshetra Samachara

10/10/2020 01:36 pm

Cinque Terre

8.01 K

Cinque Terre

0

ಸಂಬಂಧಿತ ಸುದ್ದಿ