ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕಿಗೆ ಅವಮಾನ,ಕ್ರಮಕ್ಕೆ ಕಾಂಗ್ರೇಸ್ ಮುಖಂಡ ಕಾವು‌ ಹೇಮನಾಥ ಶೆಟ್ಟಿ ಒತ್ತಾಯ

ಪುತ್ತೂರು: ದಕ್ಷಿಣಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕಿಯನ್ನು ಸಮಾರಂಭಕ್ಕೆ ಬರದಂತೆ ಅವಮಾನ ಮಾಡಿದ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಕೆ.ಪಿ.ಸಿ.ಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಆಗ್ರಹಿಸಿದ್ದಾರೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೆಪ್ಟೆಂಬರ್ 5 ರಂದು ಪುತ್ತೂರಿನಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಗೌರವ ಮತ್ತು ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಆದರೆ ಜಿಲ್ಲಾ ಪ್ರಶಸ್ತಿ ಗೆ ಆಯ್ಕೆಯಾದ ಪುತ್ತೂರಿನ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ತೆರೇಜ್.ಎಂ.ಸಿಕ್ವೇರಾ ಅವರನ್ನು ಸನ್ಮಾನ ಸ್ವೀಕರಿಸಲು ಬರದಂತೆ ತಡೆಯೊಡ್ಡಲಾಗಿತ್ತು ಎಂದು ಆರೋಪಿಸಿದ ಅವರು ಶಿಕ್ಷಕಿಯನ್ನು ಕೆಲವು ಶಿಕ್ಷಕರು ಸಂಪರ್ಕಿಸಿ ಒಂದು ವೇಳೆ ನೀವು ಕಾರ್ಯಕ್ರಮಕ್ಕೆ ಬಂದಲ್ಲಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಜನಪ್ರತಿನಿಧಿಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲಿದ್ದಾರೆ. ಆ ಕಾರಣಕ್ಕಾಗಿ ಅನಾರೋಗ್ಯದ ಕಾರಣ ನೀಡಿ ಕಾರ್ಯಕ್ರಮದಿಂದ ದೂರ ಉಳಿಯಿರಿ. ನಿಮ್ಮ ಪ್ರಶಸ್ತಿಯನ್ನು ಮನೆಗೆ ತಂದು ಮುಟ್ಟಿಸಲಾಗುವುದು ಎನ್ನುವ ಮಾತನ್ನು ಹೇಳಲಾಗಿದೆ. ಓರ್ವ ಶಿಕ್ಷಕಿಗೆ ಈ ರೀತಿಯ ಅವಮಾನ ಮಾಡಿದ ಇಲಾಖೆಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಶಿಕ್ಷಕಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಆಕೆಯನ್ನು ಮತ್ತೆ ಸನ್ಮಾನಿಸಬೇಕೆಂದು ಅವರು ಇದಢ ಸಂದರ್ಭದಲ್ಲಿ ಒತ್ತಾಯಿಸಿದರು.

Edited By : PublicNext Desk
Kshetra Samachara

Kshetra Samachara

07/09/2022 01:49 pm

Cinque Terre

810

Cinque Terre

0

ಸಂಬಂಧಿತ ಸುದ್ದಿ