ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಸಾಧ್ಯ"

ಮುಲ್ಕಿ: ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಇತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಸಿಕೊಂಡಲ್ಲಿ ಭವಿಷ್ಯದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಮುಲ್ಕಿ ವಿಜಯ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ಹೇಳಿದರು.

ಮುಲ್ಕಿ ವಿಜಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯವಾಗಲೆಂದು ಕಾಲೇಜಿನ ಆಡಳಿತ ಮಂಡಳಿ ಮತ್ತು ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ವತಿಯಿಂದ ಕಾಲೇಜಿನ ವಿದ್ಯಾರ್ಥೀಗಳಿಗೆ ಆರಂಭಗೊಂಡ ಜೆಇಇ, ನೀಟ್,ಸಿಇಟಿ, ಐಐಟಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅಕಾಡೆಮಿ ಆಫ್ ಜನರಲ್ ಎಜುಕೇಶನ್,ಮಣಿಪಾಲದ ಕಾರ್ಯದರ್ಶಿ ಬಿ.ಪಿ. ವರದರಾಜ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳ ತರಬೇತಿಗಾಗಿ ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆಯಿಂದ ತರಬೇತಿದಾರರನ್ನು ಆಹ್ವಾನಿಸಲಾಗಿದ್ದು ಅವರು ವಿದ್ಯಾರ್ಥಿಗಳಿಗೆ ತರಬೇತಿಯ ವಿಶೇಷತೆಯನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಶ್ರೀಮಣಿ ಶೆಟ್ಟಿ, ಸಿಎ ಶಿವರಾಮ ಕಾಮತ್, ಪ್ರೊ. ಸಾಮ್ ಮಾಬೆನ್,ತರಬೇತುದಾರರಾದ ಡಾ| ನಿರಂಜನ್ ಆರ್, ವಿನೋದ್ ರಮೇಶ್, ದಿಶಾ ಶೆಟ್ಟಿ,ಕಾಲೇಜಿನ ಪದವಿಪೂರ್ವವಿಭಾಗದ ಪ್ರಾಂಶುಪಾಲರಾದ ಪಮೀದಾ ಬೇಗಂ ಉಪಸ್ಥಿತರಿದ್ದರು.ಶ್ರೀಲಕ್ಷ್ಮಿ ಶೆಟ್ಟಿ,ಕು| ತೇಜಸ್ವಿನಿ ಸ್ವಾಗತಿಸಿದರು. ಜೀವನ್ ವಂದಿಸಿದರು.

Edited By : PublicNext Desk
Kshetra Samachara

Kshetra Samachara

16/06/2022 07:41 pm

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ