ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಿನಡ್ಕ:"ವಿದ್ಯಾರ್ಥಿಗಳು ಸೌಕರ್ಯಗಳನ್ನು ಉಪಯೋಗಿಸಿಕೊಂಡು ವಿದ್ಯಾವಂತರಾಗಿ"

ಮುಲ್ಕಿ: ಸಮೀಪದ ಪಂಜಿನಡ್ಕ ಅನುದಾನಿತ ಕೆ.ಪಿ.ಎಸ್.ಕೆ. ಸ್ಮಾರಕ ಪ್ರೌಢಶಾಲೆ ಹಾಗೂ ಕೊಲಕಾಡಿ ವಿದ್ಯಾ ಪ್ರಚಾರಿಣಿ ಸಂಘ ( ರಿ) ಆಶ್ರಯದಲ್ಲಿ ನೂತನ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮ ಕೊಲಕಾಡಿ ಕೆಪಿಎಸ್ಕೆ ಪ್ರೌಢಶಾಲೆಯಲ್ಲಿ ನಡೆಯಿತು.

ನೂತನ ಶಾಲಾ ವಾಹನ ಹಸ್ತಾಂತರವನ್ನು ನೆರವೇರಿಸಿ ಮುಂಬೈ ನ್ಯಾಚುರಲ್ ಐಸ್ ಕ್ರೀಮ್ ಸ್ಥಾಪಕ ಹಾಗೂ ನಿರ್ದೇಶಕರಾದ ರಘುನಂದನ್ ಎಸ್ ಕಾಮತ್ ಮಾತನಾಡಿ ವಿದ್ಯಾರ್ಥಿಗಳು ಸೌಕರ್ಯಗಳನ್ನು ಉಪಯೋಗಿಸಿಕೊಂಡು ವಿದ್ಯಾವಂತರಾಗಿ ಎಂದು ಶುಭ ಹಾರೈಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಶಾಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಸರಕಾರದ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಶ್ರಮಿಸುವುದಾಗಿ ತಿಳಿಸಿದರು.

ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೊಹರ್ ಕೋಟ್ಯಾನ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಲ್ಕಿ ನ ಪಂ ಅಧ್ಯಕ್ಷ ಸುಭಾಶ್ ಶೆಟ್ಟಿ, ಮಂಡಲಾಧ್ಯಕ್ಷ ಸುನೀಲ್ ಅಳ್ವ, ಶಾಲಾ ಸಂಚಾಲಕ ಗಂಗಾಧರ್ ಶೆಟ್ಟಿ, ರಾಘವೇಂದ್ರ ಮೊಗೆರಾಯ, ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ, ರಂಗನಾಥ ಶೆಟ್ಟಿ, ನಿತಿನ್ ಶೆಟ್ಟಿ, ದಾನಿಗಳಾದ ಸತೀಶ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಂಬರೀಶ್ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೆಟ್ಟಾ ರೋಡೊಡ್ರಿಗಸ್ ಸ್ವಾಗತಿಸಿ, ನಿವೃತ್ತ ಮುಖ್ಯೋಪಾಧ್ಯಾಯ ನಾಗಭೂಷಣ ರಾವ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

14/06/2022 03:21 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ