ಬಜಪೆ:ಕರ್ನಾಟಕ ಅರಣ್ಯ ಇಲಾಖೆ,ಸರಕಾರಿ ಫ್ರೌಢಶಾಲೆ ಬಡಗ ಎಕ್ಕಾರು,ಗ್ರಾಮ ಪಂಚಾಯತ್ ಎಕ್ಕಾರು ಇವರ ಸಹಯೋಗದಲ್ಲಿ ಅರಣ್ಯ ಇಲಾಖೆಯ ವಿಭಿನ್ನ ಪರಿಕಲ್ಪನೆಯ ಬಿತ್ತೋತ್ಸವ ಕಾರ್ಯಕ್ರಮವು ಇಂದು ಸರಕಾರಿ ಫ್ರೌಢ ಶಾಲೆ ಬಡಗ ಎಕ್ಕಾರಿನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನಾನಾ ಬಗೆಯ ಸಸ್ಯಗಳ ಬಿತ್ತನೆ ಬೀಜಗಳನ್ನು ಸಂಗ್ರಹಿಸಿದ್ದರು.ಗರಿಷ್ಠ ಪ್ರಮಾಣದ ಬೀಜಗಳನ್ನು ಸಂಗ್ರಹಿಸಿದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು.
ಈ ಸಂದರ್ಭ ಉಪವಲಯ ಅರಣ್ಯಾಧಿಕಾರಿ ಸುಧೀರ್,ಬಡಗ ಎಕ್ಕಾರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು,ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖಾ ರೈ,ಬಡಗ ಎಕ್ಕಾರು ಸರಕಾರಿ ಫ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಎನ್ .ರಾವ್,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುದೀಪ್ ಅರ್ ಅಮೀನ್ ,ಅರಣ್ಯ ಇಲಾಖೆಯ ಅಧಿಕಾರಿಗಳಾದ ರೋಹಿತ್ ಕುಮಾರ್,ಶಿವ ಪ್ರಸಾದ್,ಪ್ರಶಾಂತ್ ಪೈ,ಎಕ್ಕಾರು ಗ್ರಾಮ ಕರಣೆಕ ನಿತಿನ್ ,ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Kshetra Samachara
10/06/2022 09:43 pm