ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಎಸೆಸೆಲ್ಸಿ ಟಾಪರ್ ವಿದ್ಯಾರ್ಥಿಗಳಿಗೆ ಮುಲ್ಕಿ ಠಾಣೆ ವತಿಯಿಂದ ಗೌರವ

ಮುಲ್ಕಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 98 ಪ್ರೌಢಶಾಲೆಗಳ ವ್ಯಾಪ್ತಿಯಲ್ಲಿ 625/625 ಅಂಕಗಳಿಸಿ ಟಾಪರ್ ಸ್ಥಾನ ಪಡೆದು ಸಾಧನೆ ಮಾಡಿದ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ಶಾಲೆ ವಿದ್ಯಾರ್ಥಿನಿಯರಾದ ವಿ ಅಕ್ಷತಾ ಕಾಮತ್ ಮತ್ತು ವೀಕ್ಷಾ ರವರನ್ನು ಮೂಲ್ಕಿ ಪೊಲೀಸ್ ಠಾಣೆ ವತಿಯಿಂದ ಠಾಣೆಯ ಇನ್ಸ್ಪೆಕ್ಟರ್ ಕುಸುಮಾಧರ್ ಗೌರವಿಸಿದರು.

ಇನ್ಸ್ಪೆಕ್ಟರ್ ಕುಸುಮಾಧರ ಮಾತನಾಡಿ ವಿದ್ಯಾರ್ಥಿಗಳ ಸಾಧನೆಗೆ ತಕ್ಕ ಪ್ರತಿಫಲ ಒದಗಿಬಂದಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದ ವಿಷಯವಾಗಿದೆ ಎಂದರು.

ಈ ಸಂದರ್ಭ ಠಾಣೆಯ ಎಸ್ಐ ವಿನಾಯಕ ತೋರಗಲ್, ಎಎಸ್ಐ ಚಂದ್ರಶೇಖರ್, ಕೃಷ್ಣಪ್ಪ,ಸಂಜೀವ, ಮಹರ್ಷಿ ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಿಕಾ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಠಾಣಾ ಸಿಬ್ಬಂದಿ ಪ್ರಮೋದ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

20/05/2022 12:14 pm

Cinque Terre

2.74 K

Cinque Terre

0

ಸಂಬಂಧಿತ ಸುದ್ದಿ