ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಡ್ಕೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಗೆ ಅಭೂತಪೂರ್ವ ಬೀಳ್ಕೊಡುಗೆ.

ಮುಂಡ್ಕೂರು: ಕಿನ್ನಿಗೋಳಿ ಸಮೀಪದ ಮುಂಡ್ಕೂರು ನಲ್ಲಿ ವಯೋ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ ಪೂರ್ಣಿಮಾ ರವರನ್ನು ವಿದ್ಯಾರ್ಥಿ ಪೋಷಕರು. ಸಹಶಿಕ್ಷಕರು ಶಾಲೆಯ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ವಿಶಿಷ್ಟ ರೀತಿಯಲ್ಲಿ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಬಾಬು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್ ಹಾಗೂ ಅವರ ಪತಿ ನರಸಿಂಹ ಮೂರ್ತಿಯವರನ್ನು ಜತೆಯಾಗಿ ಗೌರವಿಸಲಾಯಿತು.

ಶಿಕ್ಷಕ ಶ್ರೀಕಾಂತ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಜಯಲಕ್ಷ್ಮಿ ವಂದಿಸಿ ,ನಿಯೋಜಿತ ಪ್ರಭಾರ ಮುಖ್ಯ ಶಿಕ್ಷಕಿ ಹಿಲ್ಡಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ತೆರದ ಜೀಪಿನಲ್ಲಿ ಪೂರ್ಣಿಮಾ ದಂಪತಿಯನ್ನು ಮನೆಯವರೆಗೆ ವಾಹನದಲ್ಲಿ ಬೀಳ್ಕೊಡಲಾಯಿತು.

Edited By : PublicNext Desk
Kshetra Samachara

Kshetra Samachara

01/12/2021 12:29 pm

Cinque Terre

1.49 K

Cinque Terre

0

ಸಂಬಂಧಿತ ಸುದ್ದಿ