ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬ್ಯಾಂಕುಗಳು ಗ್ರಾಹಕರ ಸ್ನೇಹಿಯಾಗಲಿ: ಹರಿಕೃಷ್ಣ ಪುನರೂರು

ಮುಲ್ಕಿ:ದಿ ಅಮ್ಮೆಂಬಳ ಸುಬ್ಬಾ ರಾವ್ ಪೈಯವರು ಶೈಕ್ಷಣಿಕ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್ ಸ್ಥಾಪನೆ ಮಾಡಿ ಜಿಲ್ಲೆಗೆ ದೊಡ್ಡ ಕೊಡುಗೆ ನೀಡಿದ್ದು ಅವರು ಸ್ಥಾಪಿಸಿದ ಕೆನರಾ ಬ್ಯಾಂಕ್ ಗ್ರಾಹಕರ ಸ್ನೇಹಿಯಾಗಿ ದೇಶದ ಅತ್ಯುತ್ತಮ ಬ್ಯಾಂಕ್ ಆಗಿ ಮೂಡಿಬರಲಿ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಕೆನರಾ ಬ್ಯಾಂಕ್ ಸ್ಥಾಪಕರಾದ ಮೂಲ್ಕಿಯ ಅಮ್ಮೆಂಬಳ ಸುಬ್ಬಾ ರಾವ್ ಪೈಯವರ ಜನ್ಮ ದಿನಾಚರಣೆ ಅಂಗವಾಗಿ ಮೂಲ್ಕಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ನಡೆದ ಸಂಸ್ಥಾಪಕರ ಹಾಗೂ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆನರಾ ಬ್ಯಾಂಕ್ ಮಹಾ ಪ್ರಬಂಧಕ ಬಿ.ಯೋಗೀಶ್ ಆಚಾರ್ಯರವರು ಸುಬ್ಬಾ ರಾವ್ ಪ್ರತಿಮೆಗೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಕೆನರಾ ವಿದ್ಯಾ ಜ್ಯೋತಿ ಯೋಜನೆಯಡಿ ಅರ್ಹ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಹಾಗೂ ಅರ್ಹ ಗ್ರಾಹಕರಿಗೆ ಸಾಲ ವಿತರಣಾ ಪತ್ರ ಹಸ್ತಾಂತರಿಸಲಾಯಿತು.

ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಮುಲ್ಕಿಯ ಮೂವರು ಸಾಧಕರಾದ ಜಿಲ್ಲಾ ನ್ಯಾಯಾಧೀಶೆಯಾಗಿ ನೇಮಕಗೊಂಡ ಮುಮ್ತಾಜ್ ಮುಲ್ಕಿ,, ಖ್ಯಾತ ಗಾಯಕ ರವೀಂದ್ರ ಪ್ರಭು ಮತ್ತು ಮುಖ್ಯ ಮಂತ್ರಿ ಪದಕ ವಿಜೇತ ಗೃಹ ರಕ್ಷಕ ದಳದ ನಿವೃತ್ತ ಕಮಾಂಡರ್ ಮನ್ಸೂರ್ ರವರನ್ನು ಗೌರವಿಸಲಾಯಿತು

ಕೆನರಾ ಬ್ಯಾಂಕ್ ಉಪ ಪ್ರಬಂದಕ ಜನಾರ್ಧನ ಭಕ್ತ, ಜಿ ಎಸ್ ಬಿ. ಸಭಾಗ್ರಹ ಸಮಿತಿ ಅಧ್ಯಕ್ಷ ವಿಶ್ವನಾಥ ಕಾಮತ್, ಉದ್ಯಮಿ ಕೆ.ನರಸಿಂಹ ಪೈ, ಡಾ.ಅಚ್ಯುತ ಎಮ್. ಕುಡ್ವ, ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ಸತೀಶ್ ಭಂಡಾರಿ, ಪ್ರಬಂಧಕಿ ಸುಪ್ರಿಯಾ ಶೆಣೈ ಉಪಸ್ಥಿತರಿದ್ದರು.

ಶಾಖಾ ಪ್ರಬಂಧಕಿ ರಮ್ಯಾ ಸ್ವಾಗತಿಸಿದರು. ರೇಷ್ಮಾ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು. ಶರ್ಮಿಳಾ ವಂದಿಸಿದರು.

Edited By : PublicNext Desk
Kshetra Samachara

Kshetra Samachara

19/11/2021 07:37 pm

Cinque Terre

2.25 K

Cinque Terre

0

ಸಂಬಂಧಿತ ಸುದ್ದಿ