ಮುಲ್ಕಿ: ಕೊರೊನಾ ಮಹಾಮಾರಿ ಯಿಂದಾಗಿ ಕಳೆದ ಒಂದುವರೆ ವರ್ಷದಿಂದ ಸ್ಥಗಿತಗೊಂಡಿದ್ದ ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ ಹಳೆಯಂಗಡಿ ಪಕ್ಷಿಕೆರೆ ಬಳಕುಂಜೆ ಅತಿಕಾರಿಬೆಟ್ಟು ಗ್ರಾಮೀಣ ಪ್ರದೇಶದಲ್ಲಿ ಒಂದರಿಂದ ಐದನೇ ತರಗತಿಯ ಶಾಲಾ ಪ್ರಾರಂಭೋತ್ಸವ ಸರಳ ರೀತಿಯಲ್ಲಿ ನಡೆದಿದೆ
ಮುಲ್ಕಿ ಕ್ಲಸ್ಟರ್ ವ್ಯಾಪ್ತಿಯ 13 ಹಿರಿಯ ಪ್ರಾಥಮಿಕ ಮತ್ತು ನಾಲ್ಕು ಕಿರಿಯ ಪ್ರಾಥಮಿಕ ಸರಕಾರಿ ಅನುದಾನಿತ ಶಾಲೆಗಳ ಹಾಗೂ 5 ಅನು ದಾನೇತರ ಶಾಲೆಗಳು ಸರಿ ಒಟ್ಟು 22 ಶಾಲೆಗಳಲ್ಲಿ ಸೋಮವಾರದಿಂದ 1ರಿಂದ 5ನೇ ತರಗತಿ ಮಕ್ಕಳ ಶಾಲೆ ಆರಂಭವಾಗಿದೆ.
ಶನಿವಾರದಿಂದಲೇ ಆಯಾ ಶಾಲೆಯ ವ್ಯಾಪ್ತಿಯ ಸ್ಥಳೀಯಾಡಳಿತದ ಸಹಕಾರದಲ್ಲಿ ಸ್ವಚ್ಛತೆ ಮಾಡಲಾಗಿತ್ತು. ಶಾಲೆಯ ತರಗತಿಗಳನ್ನು ಸ್ವಾನಿಟೈಸಿಂಗ್ ಮಾಡಿ ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ವಿದ್ಯಾರ್ಥಿಗಳು ತರಗತಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸೂಚಿಸಲಾಗಿತ್ತು.
Kshetra Samachara
25/10/2021 08:06 pm