ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ನವನವ ದುರ್ಗಾ ಕೃತಿ ಬಿಡುಗಡೆ 

ಕಟೀಲು : ಜಾನಪದ ವಿದ್ವಾಂಸ, ಸಂಶೋಧಕ ಕೆ. ಎಲ್. ಕುಂಡಂತಾಯ ಬರೆದ ಕುಂಜೂರು ಸರಸ್ವತೀ ಪ್ರಕಾಶನದಿಂದ ಪ್ರಕಟಿತ ಶಕ್ತಿ ಉಪಾಸನೆ, ದುರ್ಗೆಯರ ಕುರಿತಾದ 'ನವ ನವ ದುರ್ಗಾ' ಕೃತಿಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. 

ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ ಧಾರ್ಮಿಕ ಸಾಂಸ್ಕೃತಿಕ ಜಾನಪದ ವಿಚಾರಗಳಲ್ಲಿ ಸಂಶೋಧನಾತ್ಮಕ ಬರಹಗಳನ್ನು ಬರೆಯುತ್ತಿರುವ ಸಾಹಿತಿ ಕುಂಡಂತಾಯರ ಹೊಸ ಕೃತಿ ಶಕ್ತಿ ಆರಾಧನೆಯ ಕುರಿತಾದುದು. ಆಧ್ಯಾತ್ಮ ಆಸಕ್ತರಿಗೆ ಅನುಕೂಲವಾಗಲಿ ಎಂದರು. 

ಕಟೀಲು ದೇಗುಲದ ಆಡಳಿತ ಸಮಿತಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸದಾನಂದ ಆಸ್ರಣ್ಣ, ನಿವೃತ್ತ ಪ್ರಾಚಾರ್ಯ ಸುದರ್ಶನ್ ಉಪಸ್ಥಿತರಿದ್ದರು. 

Edited By : PublicNext Desk
Kshetra Samachara

Kshetra Samachara

12/10/2021 10:02 pm

Cinque Terre

442

Cinque Terre

0

ಸಂಬಂಧಿತ ಸುದ್ದಿ