ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ದ. ಕ. ಜಿಪಂ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮುಲ್ಕಿಯ ಕಾರ್ನಾಡು ಪೂಂಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಪುಂಜಾ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರಾದ ಆದಿತ್ಯ ಪೂಂಜಾ ಮಾತನಾಡಿ ರಾಷ್ಟ್ರವೇ ಕೊರೊನಾದಿಂದ ತತ್ತರಿಸುತ್ತಿದ್ದು ಶಿಕ್ಷಕರು ಮಕ್ಕಳ ಆರೋಗ್ಯದ ಜೊತೆಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಈ ಸಂದರ್ಭಸಮಾರಂಭದ ಮುಖ್ಯ ಅತಿಥಿಗಳಾಗಿ ಟ್ರಸ್ಟ್ ನ ಸದಸ್ಯರಾದ ಸುಂದರ್ ಶೆಟ್ಟಿ ಕುಬೆವೂರು, ಚಂದ್ರಹಾಸ ಶೆಟ್ಟಿ, ಶಿಕ್ಷಕಿ ವಾಸಂತಿ, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು
Kshetra Samachara
28/07/2021 10:14 pm