ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಬೈಕಂಪಾಡಿ ವಿದ್ಯಾರ್ಥಿ ಸಂಘದ ಸಭಾಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ಮಕ್ಕಳ ನಾಟಕದ ರಂಗ ಪರಿಕರ ಕಾರ್ಯಾಗಾರ ಸಂಪನ್ನಗೊಂಡಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕ ಪ್ರೇಮನಾಥ ಮರ್ಣೆ ಮತ್ತು ಸೂರಜ್ ಶೆಟ್ಟಿ ಹೊಯಿಗೆಬೈಲ್ ಮಕ್ಕಳಿಗೆ ಮುಖವಾಡ, ಕಿರೀಟ ಇತ್ಯಾದಿ ತಯಾರಿಯ ತರಬೇತಿ ನೀಡಿದರು.
ಬೈಕಂಪಾಡಿ ರೋಟರಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಮತ್ತು ಉದ್ಯಮಿ ಉಸ್ಮಾನ್ ಕುಕ್ಕಾಡಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಷ್ಟೂ ವ್ಯಕ್ತಿತ್ವ ವಿಕಸನವಾಗುತ್ತದೆ. ಈ ಕೆಲಸ ಶ್ಲಾಘನೀಯ. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಮಕ್ಕಳು ಮುಂದೆ ಖಂಡಿತಾ ಸಾಧನೆ ಮಾಡುತ್ತಾರೆಂದು ಹೇಳಿದರು.
ನ್ಯಾಯವಾದಿ, ನಾಟಕಕಾರ ಶಶಿರಾಜ್ ಕಾವೂರು, ನಟ, ಗಾಯಕ ಮೈಮ್ ರಾಮದಾಸ್, ಮುಖ್ಯ ಅತಿಥಿಗಳಾದ ನಂದಿನಿ ರಘುಚಂದ್ರ, ಆಶಾ ಪೈ, ಕೆನರಾ ಪಿಯು ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ, ರಂಗಸಂಗಾತಿಯ ಸುರೇಶ್ ಬಜ್ಪೆ, ಬೈಕಂಪಾಡಿ ವಿದ್ಯಾರ್ಥಿ ಸಂಘದ ರಾಮಚಂದ್ರ ಬೈಕಂಪಾಡಿ, ಮಧುಕರ್ ಉಪಸ್ಥಿತರಿದ್ದರು.
Kshetra Samachara
26/01/2021 12:50 pm