ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: " ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಪ್ರಾಪ್ತಿಗೆ ಎಲ್ಲರೂ ಸರಕಾರದೊಂದಿಗೆ ಕೈ ಜೋಡಿಸೋಣ"

ಮುಲ್ಕಿ: ಸರಕಾರದ ಜೊತೆಗೂಡಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗುವಲ್ಲಿ ಸಮುದಾಯದ ಎಲ್ಲರೂ ಕೈ ಜೋಡಿಸಿ ಸಹಕರಿಸಬೇಕೆಂದು ಕರ್ನಾಟಕ ಜ್ಞಾನ ವಿಜ್ಞಾನ ಕೇಂದ್ರ ಹಾಗೂ 'ಆಪ್ನಾ ದೇಶ್' ಕೋಶಾಧಿಕಾರಿ , ನಿವೃತ್ತ ಸಾಫ್ಟ್ ವೇರ್ ತಜ್ಞ, ಶಿಕ್ಷಣ ತಜ್ಞರಾದ ಅಶೋಕ್ ಭಟ್ ಹೇಳಿದರು.

ಹಳೆಯಂಗಡಿ ಬಳಿ ಪಡುಪಣಂಬೂರಿನಲ್ಲಿ ನಡೆದ ಅಕ್ಷರ ಫೌಂಡೇಶನ್ ‌ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಜರುಗಿದ ಗಣಿತ ಕಲಿಕಾ ಆಂದೋಲನ ಜಿಲ್ಲಾ ಮಟ್ಟದ ಪರ್ಯಾಯ ಗಣಿತ ಕಲಿಕಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಕೋವಿಡ್-19 ಹರಡುವಿಕೆಯಿಂದಾಗಿ ಎಲ್ಲ ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದು, ಸಮುದಾಯದಲ್ಲಿ 100 ದಿನಗಳ ಗಣಿತ ಕಲಿಕಾ ಕಾರ್ಯಕ್ರಮದಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸಲು, ಸ್ಥಳೀಯ ಜನರ ಪಾಲ್ಗೊಳ್ಳುವಿಕೆ, ಗ್ರಾಪಂ ಮಟ್ಟದ ಶೈಕ್ಷಣಿಕ ತಂಡದ ನಾಯಕರು , ಶೈಕ್ಷಣಿಕ ಸ್ವಯಂ ಸೇವಕರು, ಎಸ್ ಡಿಎಂಸಿಯವರು, ಜನಪ್ರತಿನಿಧಿಗಳು, ಶಿಕ್ಷಣ ಆಸಕ್ತರು, ಹಳೆವಿದ್ಯಾರ್ಥಿಗಳು , ಸಮಾಜ ಸೇವಕರ ಸಹಕಾರದಲ್ಲಿ ಈ ಕಾರ್ಯಕ್ರಮ ಜಿಲ್ಲೆಯ ಎಲ್ಲ ಗ್ರಾಪಂನ ಸರಕಾರಿ ಶಾಲೆಯಲ್ಲಿ ನಡೆಯಲಿದೆ.

ಮುಖ್ಯ ಅತಿಥಿಯಾಗಿ ಎಸ್ ಡಿ ಎಂಸಿ ಮಾಜಿ ಅಧ್ಯಕ್ಷ , ಶಿಕ್ಷಣ ಪ್ರೇಮಿ ಕೆ.ಎಂ. ಇದಿನಬ್ಬ ಭಾಗವಹಿಸಿದ್ದರು.

ನವಜ್ಯೋತಿ ಯುವತಿ ಮಂಡಳಿ ಅಧ್ಯಕ್ಷೆ ಶೈಲಜಾ ಶೆಟ್ಟಿ, ಕಾರ್ಯದರ್ಶಿ ಕುಶಲ , ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಸರಿತಾ ಶೆಟ್ಟಿ, ಕೀರ್ತಿ, ಲತಾ ಮತ್ತಿತರರು ಉಪಸ್ಥಿತರಿದ್ದರು.

ಸಮಾಜಸೇವಕಿ, ಕರ್ನಾಟಕ ಜ್ಞಾನ ವಿಜ್ಞಾನ ಕೇಂದ್ರ ಮುಖ್ಯಸ್ಥೆ, ಶಿಕ್ಷಣಪ್ರೇಮಿ ನಂದಾ ಪಾಯಸ್ ಸಂಘಟಿಸಿ, ನಿರೂಪಿಸಿದರು. ಅಕ್ಷರ ಫೌಂಡೇಶನ್ ನ ಜಿಲ್ಲಾ ವ್ಯವಸ್ಥಾಪಕ ನವೀನ್, ಗಣಿತ ಕಲಿಕಾ ಕಾರ್ಯಕ್ರಮ ಬಗ್ಗೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.

Edited By : Nirmala Aralikatti
Kshetra Samachara

Kshetra Samachara

30/12/2020 12:19 pm

Cinque Terre

4.62 K

Cinque Terre

0

ಸಂಬಂಧಿತ ಸುದ್ದಿ