ಮಂಗಳೂರು: ಟೈಮ್ ಇದೇ ಮೊದಲ ಬಾರಿ ಆರಂಭಿಸಿರುವ ‘ಕಿಡ್ ಆಫ್ ದಿ ಈಯರ್’ ಗೌರವಕ್ಕೆ ಮಂಗಳೂರು ಮೂಲದ 15 ವರ್ಷದ ಯುವ ವಿಜ್ಞಾನಿ ಗೀತಾಂಜಲಿ ರಾವ್ ಆಯ್ಕೆಯಾಗಿದ್ದಾರೆ.
ಗೀತಾಂಜಲಿ ರಾವ್ ಅಮೆರಿಕದ ಕೊಲೊರಾಡೊ ರಾಜ್ಯದ ಡೆನೆವರ್ ನಗರದಲ್ಲಿ ನೆಲೆಸಿದ್ದಾರೆ. ಮಂಗಳೂರು ಮೂಲದ ರಾಮ ರಾವ್, ಭಾರತಿ ದಂಪತಿಯ ಪುತ್ರಿ ಗೀತಾಂಜಲಿ ಅವರನ್ನು ಟೈಮ್ ಮ್ಯಾಗಜಿನ್ಗಾಗಿ ಹಾಲಿವುಡ್ ಜನಪ್ರಿಯ ನಟಿ ಏಂಜೆಲಿನಾ ಜೂಲಿ ಸಂದರ್ಶನ ನಡೆಸಿದ್ದರು.
ನಾಮನಿರ್ದೇಶನಗೊಂಡಿದ್ದ 5 ಸಾವಿರಕ್ಕೂ ಅಧಿಕ ಮಂದಿ ಅಮೆರಿಕನ್ನರ ಪೈಕಿ ಗೀತಾಂಜಲಿ ರಾವ್ ಸಂಶೋಧನೆಗಳು ಮೇಲುಗೈ ಸಾಧಿಸಿವೆ. ವಿಷಪೂರಿತ ಕಲುಷಿತ ನೀರನ್ನು ಗುರುತಿಸುವುದು ಹಾಗೂ ಆನ್ಲೈನ್ನಲ್ಲಿ ಅವಾಚ್ಯ ನಿಂದನೆ ಅಥವಾ ಮಾನಹಾನಿಕರ ರೀತಿಯ ಅಭಿವ್ಯಕ್ತಿ ಪತ್ತೆಗೆ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಜ್ಞಾನವನ್ನು ಗೀತಾಂಜಲಿ ಆವಿಷ್ಕರಿಸಿದ್ದರು.
Kshetra Samachara
05/12/2020 05:56 pm