ಮಂಗಳೂರು: ಪಿಎಚ್ ಡಿ ಮತ್ತು ಎಂಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಮೊತ್ತವನ್ನು ರಾಜ್ಯ ಸರಕಾರ ಕಡಿತಗೊಳಿಸಿರುವುದನ್ನು ಎನ್‌ಎಸ್‌ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಖಂಡಿಸಿದ್ದಾರೆ.
ಪಿಎಚ್ಡಿ ಮಾಡುವವರಿಗೆ ಮೂರು ವರ್ಷ, ಎಂಫಿಲ್ ಮಾಡುವವರಿಗೆ ಎರಡು ವರ್ಷ ಮಾಸಿಕ 25,000 ರೂ. ನೀಡಲಾಗುತ್ತಿದ್ದು, ಕಳೆದ ಹತ್ತು ತಿಂಗಳಿನಿಂದ ಈ ಮೊತ್ತ ಪಾವತಿಸದೆ ಇದೀಗ ಕಡಿತಗೊಳಿಸಿರುವುದಾಗಿ ತಿಳಿಸಿರುವುದು ಅಮಾನವೀಯ. ಕೊರೊನಾ ಸಂದರ್ಭ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಲವಾರು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟು ಮಾಡಿದ ಸರಕಾರ ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
Kshetra Samachara
19/11/2020 09:12 am