ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಶೋರ್ ಸಿ. ಅವರಿಗೆ ಗೌರವ ಡಾಕ್ಟರೇಟ್ ಪದವಿ

ಮಂಗಳೂರು: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಅಂಗಸಂಸ್ಥೆ ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದ ಜಲ ಪರಿಸರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರೊ.ಡಾ.ಎ.ಟಿ. ರಾಮಚಂದ್ರ ನಾಯ್ಕ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕಿಶೋರ್ ಸಿ. ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

‘ಸಿಹಿನೀರಿನ ಕೊಳಗಳಲ್ಲಿನ ಪ್ರಾಥಮಿಕ ಉತ್ಪಾದಕತೆಯ ಮೌಲ್ಯಮಾಪನ’ ವಿಷಯದಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ದೊರೆತಿದೆ. ಕಿಶೋರ್ ಸಿ. ದ.ಕ. ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿನ ರೈತರ ತೋಟದಲ್ಲಿರುವ ಆಯ್ದ ಕೃಷಿ-ಕೊಳಗಳಲ್ಲಿ ಗೆಂಡೆ ಮೀನು ಬೆಳವಣಿಗೆ, ಕೊಳದ ನೀರು ಮತ್ತು ಮಣ್ಣಿನ ಗುಣಮಟ್ಟ ಪರೀಕ್ಷೆ ಹಾಗೂ ಜಲ ಉತ್ಪಾದಕತೆ ಬಗ್ಗೆ 17 ತಿಂಗಳ ಅಧ್ಯಯನ ನಡೆಸಿದ್ದರು.

ಕಿಶೋರ್ ಶಿವಮೊಗ್ಗ ಮೂಲದ ಚಂದ್ರ ನಾಯ್ಕ ಮತ್ತು ವನಿತಾ ದಂಪತಿ ಪುತ್ರ.

Edited By : Nirmala Aralikatti
Kshetra Samachara

Kshetra Samachara

13/11/2020 10:28 am

Cinque Terre

3.53 K

Cinque Terre

0

ಸಂಬಂಧಿತ ಸುದ್ದಿ