ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 8 ಗೋ ಶಾಲೆಗಳಿಗೆ 16.89 ಲಕ್ಷ ಅನುದಾನ ವಿತರಣೆ; ಜಿಲ್ಲಾಧಿಕಾರಿ

ಮಂಗಳೂರು: ಕೋವಿಡ್-19 ಅವಧಿಯಲ್ಲಿ ಎಂಟು ಗೋ ಶಾಲೆಗಳಿಗೆ 16,89,975 ರೂ. ಅನುದಾನ ನೀಡಲಾಗಿದೆ ಎಂದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಶು ಇಲಾಖೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ ಸಹಾಯಧನ ಕೋರಿ 13 ಗೋಶಾಲೆಗಳು ಅರ್ಜಿ ಸಲ್ಲಿಸಿವೆ ಎಂದರು.

ಸರಕಾರದಿಂದ ಗೋ ಶಾಲೆಗಳ ಜಾನುವಾರುಗಳ ನಿರ್ವಹಣೆಗೆ ‘ಮೈಸೂರಿನ ಪಿಂಜರಾಪೋಲ್ ಮತ್ತು ಇತರ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮ’ದಡಿ ಸಹಾಯಧನ ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಪಶುಪಾಲನಾ ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಟಿ.ಜಿ. ಪ್ರಸನ್ನ, ವಿನಯ್ ಎಲ್. ಶೆಟ್ಟಿ, ಎಚ್.ಶಶಿಧರ ಶೆಟ್ಟಿ, ಸುಮಾ ಆರ್. ನಾಯಕ್ ಹಾಗೂ ವಿವಿಧ ಗೋಶಾಲೆಯ ಮುಖ್ಯಸ್ಥರು, ಪಶು ವೈದ್ಯಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

11/11/2020 11:42 am

Cinque Terre

6.12 K

Cinque Terre

0

ಸಂಬಂಧಿತ ಸುದ್ದಿ