ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಶಿವನಗರ ಸರ್ಕಾರಿ ಶಾಲೆಗೆ ಹೊಸಕಳೆ ನೀಡಿದ ಹಳೆ ವಿದ್ಯಾರ್ಥಿಗಳು

ಬಂಟ್ವಾಳ: ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ಮಾವಿನಕಟ್ಟೆ ಶಿವನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಬಣ್ಣ ಬಳಿದು, ಚಿತ್ತಾರ ಬಿಡಿಸಿ ಹೊಸ ಕಳೆ ನೀಡಿದ್ದಾರೆ.

ಹೆಮ್ಮಾರಿ ಕೊರೊನಾ ವೈರಸ್‌ನಿಂದಾಗಿ ಮುಚ್ಚಿದ್ದ ಶಾಲೆಗಳ ಪುನಾರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಮಧ್ಯೆ ವಿದ್ಯಾರ್ಥಿಗಳು ಶಾಲೆಗೆ ಹೊಸ ಸ್ಪರ್ಶ ನೀಡಿರುವುದು ಅನೇಕ ಮೆಚ್ಚುಕೆಗೆ ಕಾರಣವಾಗಿದೆ. ಸುಮಾರು 25ಕ್ಕೂ ಹೆಚ್ಚು ಸದಸ್ಯರಿದ್ದ ಹಳೆ ವಿದ್ಯಾರ್ಥಿಗಳ ತಂಡವು ಶಾಲೆಯ ಹೊರ ಮತ್ತು ಒಳಗೋಡೆಗಳನ್ನು ವರ್ಲಿ ಕಲೆ ಸೇರಿದಂತೆ ವಿವಿಧ ಚಿತ್ತಾರಳಗಳ ಮೂಲಕ ಶೃಂಗಾರಗೊಳಿಸಿದ್ದಾರೆ.

ಬೆಂಗಳೂರುನಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಅವಿನಾಶ್ ಬದ್ಯಾರ್ ತಂಡದ ನೇತೃತ್ವ ವಹಿಸಿದ್ದರು. ಅವಿನಾಶ್ ಚಿತ್ರಕಲಾವಿದರೂ ಹೌದು. ಹೀಗಾಗಿ ಅವರ ಕ್ರಿಯಾತ್ಮಕ ಚಿಂತನೆಯ ಫಲದಿಂದ ಶಾಲೆಗೆ ನ್ಯೂ ಲುಕ್ ಸಿಕ್ಕಿದೆ.

Edited By : Vijay Kumar
Kshetra Samachara

Kshetra Samachara

20/10/2020 07:58 pm

Cinque Terre

2.23 K

Cinque Terre

0

ಸಂಬಂಧಿತ ಸುದ್ದಿ