ಮುಲ್ಕಿ: ಮುಲ್ಕಿ ನಾಲ್ಕು ಪಟ್ನ ಮೋಗವೀರ ಸಭಾ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ವೀರಯೋಧರಿಗೆ ಸನ್ಮಾನ ಕಾರ್ಯಕ್ರಮ ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಮಾತನಾಡಿ ಮೊಗವೀರರು ಬಪ್ಪನಾಡಿನ ಆಸ್ತಿಯಾಗಿದ್ದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಪ್ರೋತ್ಸಾಹಿಸಿ ಗೌರವಿಸುವ ಕಾರ್ಯ ಶ್ಲಾಘನೀಯ, ವಿದ್ಯಾರ್ಥಿಗಳು ಸಾಧಕರಾಗಿ ನವ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ವೈ ಎನ್ ಸಾಲ್ಯಾನ್,ಮುಲ್ಕಿ ನಾಲ್ಕು ಪಟ್ನ ಮೋಗವೀರ ಸಭಾದ ಅಧ್ಯಕ್ಷ ಸುಜಿತ್ ಎಸ್ ಸಾಲ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ, ಶಶಿಕಾಂತ ಟಿ ಕೋಟ್ಯಾನ್, ಕೋಶಾಧಿಕಾರಿ ಸೂರ್ಯ ಪುತ್ರನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವೀರ ಯೋಧರಾದ ಇಂದುಪ್ರಭ ಪರವಾಗಿ ಕ್ಯಾ. ವಾಸು ಪುತ್ರನ್, ಸುಬೇದಾರ್ ಮಧುಕರ್ ಜಿ ಪರವಾಗಿ ಚಂಚಲಾಕ್ಷಿ ಸೋಮನಾಥ ಸಾಲ್ಯಾನ್ ಪರವಾಗಿ ಆಶಾ ಸೋಮನಾಥ ಸಾಲ್ಯಾನ್,ರವರಿಗೆ ಗೌರವಾರ್ಪಣೆ ಕಾರ್ಯಕ್ರಮ ಹಾಗೂ ಸಾಧಕರ ನೆಲೆಯಲ್ಲಿ ಡಾ. ಹಿತಾಶ್ರೀ, ನತಾಶಾ ಅಗರ್ವಾಲ್, ಹಿತೇಶ್ ಶ್ರೀಯಾನ್ ಅವರನ್ನು ಸನ್ಮಾನಿಸಲಾಯಿತು.
Kshetra Samachara
09/10/2022 04:49 pm