ಮುಲ್ಕಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ಸಿ.ಎಸ್.ಐ.ಚರ್ಚ್ ಗಳ ಮಹಿಳಾ ಕೂಟದವರಿಗಾಗಿ ಒಂದು ದಿನದ ಆತ್ಮೀಕ ಕೂಟ ಹಳೆಯಂಗಡಿ ಸಿ.ಎಸ್.ಐ ಅಮ್ಮನ್ ಚರ್ಚ್ ನಲ್ಲಿ ನಡೆಯಿತು.
ಸ್ತ್ರೀಯರ ಜೀವನದಲ್ಲಿ ಕ್ರಿಸ್ತೀಯ ಮೌಲ್ಯ ಹಾಗೂ ಜವಾಬ್ದಾರಿ ಎಂಬ ಶೀರ್ಷಿಕೆಯನ್ನು ಒಳಗೊಂಡ ಈ ಕೂಟವನ್ನು ಸ್ಥಳೀಯ ಸಭಾ ಪಾಲಕರಾದ ರೆ. ವಿನಯಲಾಲ್ ಬಂಗೇರ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಣಿ ಎಸ್. ಬಂಗೇರ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಭಿಶಿಕ್ತ ಮಹಿಳೆಯರಾದ ರೆ. ಸಿಸ್ಟರ್ ಸುಕುಮಾರಿ ಜತನ್ನ, ರೆ. ಡಾ. ಎವ್ಲಿನ್ ಅಮ್ಮಣ್ಣ, ರೆ. ಶಶಿಕಲ ಅಂಚನ್, ರೆ. ರೇಶ್ಮಾ ರವಿಕಲಾ, ರೆ. ರೆಚಲ್ ರವರು ಭಾಗವಹಿಸಿ ಮೌಲ್ಯಾಧಾರಿತ ವಿಷಯ ಗಳನ್ನು ಹಂಚಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಯಾಸಿಸ್ ನ ಮಹಿಳಾ ಪದಾಧಿಕಾರಿ ಕಾರ್ಯದರ್ಶಿ ಶೋಭಾ ಅಬ್ರಾಹಂ, ಕೋಶಾಧಿಕಾರಿ ಲಿಲ್ಲಿ ಜೋಯ್ಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಭಾ ಪರಿಪಾಲನ ಸಮಿತಿಯ ಸದಸ್ಯರಾದ ಶ್ರೀ ಆಸ್ಟಿನ್ ಕರ್ಕಡ, ವಸಂತ್ ಬೆರ್ನಾಡ್, ಜೇಮ್ಸ್ ಕರ್ಕಡ, ಸಿಡ್ನಿ ಕರ್ಕಡ, ಶರ್ಲಿ ಬಂಗೇರ, ಲಾವಣ್ಯ ಕೋಟ್ಯಾನ್ ಭಾಗವಹಿಸಿದ್ದರು. ಕೋಶಾಧಿಕಾರಿ ಸಾರ ಕರ್ಕಡ ಸ್ವಾಗತಿಸಿ. ರೆನಿಟ ಕರ್ಕಡ ವಂದಿಸಿದರು ಸುಷ್ಮಾ ಕರ್ಕಡ ನಿರೂಪಿಸಿದರು.
Kshetra Samachara
08/10/2022 07:11 pm