ಕಟೀಲು :ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ವಿಶೇಷ ರಂಗ ಪೂಜೆ ನಡೆಯಿತು.
ಆರು ನೂರಕ್ಕೂ ಹೆಚ್ಚು ವಿಶಿಷ್ಟ ಆರತಿಗಳಿಂದ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮಹಾಪೂಜೆಯನ್ನು ಸಹಸ್ರಾರು ಮಂದಿ ಭಕ್ತಿಭಾವಪರವಶರಾಗಿ ಕಣ್ತುಂಬಿಕೊಂಡರು. ವಾದ್ಯ ಬೇಂಡು ಚೆಂಡೆ ಜಾಗಟೆಗಳ ವೈಭವದೊಂದಿಗೆ ನಡೆದ ಮಹಾಪೂಜೆಯ ಬಳಿಕ ಮೂಡೆ ಪ್ರಸಾದ ವಿತರಿಸಲಾಯಿತು.ಸಾವಿರದ ನಾಲ್ಕು ನೂರಕ್ಕೂ ಹೆಚ್ಚು ವಾಹನ ಪೂಜೆ ನಡೆಯಿತು.
Kshetra Samachara
04/10/2022 10:12 pm