ಸುರತ್ಕಲ್:ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸರಕಾರದ ವತಿಯಿಂದ ಅನುದಾನ ಬಿಡುಗಡೆ ಮಾಡಲು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಶಾಸಕ ಡಾ. ಭರತ್ ಶೆಟ್ಟಿ ವೈ ರವರ ನೇತೃತ್ವದಲ್ಲಿ ಚತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ನಿಯೋಗ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿತ್ತು.
ಇದಕ್ಕೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು *2 ಕೋಟಿ ರೂಪಾಯಿ ಮಂಜೂರಾತಿಗೆ ಅನುಮತಿ ನೀಡಿದರು.
ಈ ಸಂದರ್ಭ ಸಮಿತಿ ಸಂಚಾಲಕ ಮತ್ಸ್ಯರಾಜ್ ಉಮೇಶ್ ಟಿ.ಕರ್ಕೇರ, ಪ್ರ.ಕಾ ಗಣೇಶ್ ಹೊಸಬೆಟ್ಟು, ಕೃಷ್ಣಶೆಟ್ಟಿ, ಪುರುಷೋತ್ತಮ್ ಎನ್.ಆರ್ ಮತ್ತಿತರ ಪದಾಧಿಕಾರಿಗಳು ನಿಯೋಗದಲ್ಲಿದ್ದರು.
Kshetra Samachara
22/09/2022 09:57 am