ಮುಲ್ಕಿ: ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪೈರ್ ನ ವತಿಯಿಂದ "ವರ್ಲ್ಡ್ ಸರ್ವಿಸ್ ವೀಕ್" ಅಂಗವಾಗಿ ಹಸಿವು ನೀಗಿಸಿ ಕಾರ್ಯಕ್ರಮದಡಿಯಲ್ಲಿ ನಾಲ್ಕನೇ ದಿನ ಕಾರ್ಕಳ ಕುಕ್ಕುಂದೂರು ವಿಜೇತ ದೇವರ ಮಕ್ಕಳ ವಸತಿ ಶಾಲೆಯ 89 ವಿಶೇಷ ಚೇತನ ಮಕ್ಕಳು ಹಾಗೂ 23 ಜನ ಮೇಲ್ವಿಚಾರಕರು,ಮತ್ತಿತರರು ಸೇರಿ 122 ಜನಕ್ಕೆ ಮಧ್ಯಾಹ್ನದ ಊಟವನ್ನು ನೀಡಲಾಯಿತು.
ಈ ಸಂದರ್ಭ ಲ. ವೆಂಕಟೇಶ ಹೆಬ್ಬಾರ್ ಮಾತನಾಡಿ ಹಸಿವು ಮುಕ್ತ ಭಾರತ ಅಭಿಯಾನ ನಿರಂತರವಾಗಿ ನಡೆಯಲಿದೆ ಎಂದರು
ಸಂಸ್ಥೆಯ ಪದಾಧಿಕಾರಿಗಳಾದ ಪ್ರತಿಭಾ ಹೆಬ್ಬಾರ್ ಸುದೀರ್ ಬಾಳಿಗಾ ಉಪಸ್ಥಿತರಿದ್ದರು
Kshetra Samachara
14/09/2022 05:20 pm