ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ಧಾರ್ಮಿಕ ಕಾರ್ಯಕ್ರಮಗಳು ಸಂಘಟನೆಗೆ ಪೂರಕ

ಮುಲ್ಕಿ:ಧಾರ್ಮಿಕ ಕಾರ್ಯಕ್ರಮಗಳು ಸಂಘಟನೆಗೆ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಕಟೀಲು ದೇವಳದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಹೇಳಿದರು.

ಅವರು ಕಿನ್ನಿಗೋಳಿ ಸಮೀಪದ ರಾಜರತ್ನಾಪುರ ಬಾಲಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಂದು ಬಾಲಗಂಗಾಧರ ತಿಲಕರು ಪ್ರಾರಂಭಿಸಿದ ಗಣೇಶೋತ್ಸವ, ಇಂದು ಪ್ರತೀ ಗ್ರಾಮ ಗ್ರಾಮಗಳಲ್ಲಿ ಆಚರಿಸಲಾಗುತ್ತಿದ್ದು, ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿ ಎಂದರು.

ಈ ಸಂದರ್ಭ  ರುದ್ರ ಭೂಮಿ ನಿರ್ವಾಹಕ ಮಾಧವ ಶೆಟ್ಟಿಗಾರ್,  ಬೀಡಿ ಗುತ್ತಿಗೆದಾರ ಅಬ್ದುಲ್ ಖಾದರ್, ಪವರ್ ಲಿಪ್ಟಿಂಗ್ ನಲ್ಲಿ ಸಾಧನೆ ಮಾಡಿದ ದಿಶಾ ಕುಕ್ಯಾನ್ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡೆತ್ತೂರು ದೇವಸ್ಯ ಮಠ  ವೇದವ್ಯಾಸ ಉಡುಪ,ಕಿನ್ನಿಗೋಳಿ  ಜಿ.ಎಸ್.ಬಿ ಅಸೋಸಿಯೇಶನ್ ನ ಅಧ್ಯಕ್ಷ ರಾಜೇಶ್ ನಾಯಕ್, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಯೋಗೀಶ್ ಆಚಾರ್ಯ, ಉದ್ಯಮಿ ಲೋಕಯ್ಯ ಸಾಲಿಯಾನ್ ಕೊಂಡೇಲ,  ಬಾಲಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಈಶ್ವರ್ ಕಟೀಲ್,  ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ರೇಶ್ಮಾ ಶೆಟ್ಟಿ, ಬಾಲಗಣೇಶೋತ್ಸವ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ್ ಶೆಟ್ಟಿ ಕೊಡೆತ್ತೂರು, ಪ್ರೀತೇಶ್ ಸನ್ಮಾನ ಪತ್ರವಾಚಿಸಿದರು ಗಣೇಶ್,  ಸಂಧ್ಯಾ ಸ್ವಾಗತಿಸಿ, ಅನುಷಾ ಕರ್ಕೇರ ಧನ್ಯವಾದ ಸಮರ್ಪಿಸಿದರು. ರೇವತಿ ಪುರುಶೋತ್ತಮ್ ಮತ್ತು  ಅರುಣ್ ಉಲ್ಲಂಜೆ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

03/09/2022 08:06 pm

Cinque Terre

1.71 K

Cinque Terre

0

ಸಂಬಂಧಿತ ಸುದ್ದಿ