ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಭಾರತದ ಎಲ್ಲಾ ಭಾಷೆಗಳಿಗೆ ಮೂಲ ಸಂಸ್ಕ್ರತ: ವಾಗೀಶ ಶಾಸ್ತ್ರಿ

ಸುರತ್ಕಲ್: ಪುರುಷಾರ್ಥಗಳಿಗೆ ಸಂಬಂಸಿದ ಶಾಸ್ತ್ರಗಳು ಸಂಸ್ಕೃತದಲ್ಲಿದ್ದು ರಾಮಾಯಣ, ಮಹಾಭಾರತ, ಪುರಾಣಾದಿಗಳ ಭಾಷೆಯೂ ಸಂಸ್ಕೃತವಾಗಿದೆ ವರ್ತಮಾನಕಾಲದಲ್ಲಿ ಆಂಗ್ಲಭಾಷೆಯಲ್ಲಿ ಎಲ್ಲಾ ವಿಷಯಗಳಿಗೆ ಸಂಬಂಸಿದ ಪುಸ್ತಕಗಳು ಲಭ್ಯವಿದೆ .ಹಿಂದೆ ಎಲ್ಲಾ ಶಾಸ್ತ್ರಗಳೂ ಸಂಸ್ಕೃತ ಭಾಷೆಯಲ್ಲಿಯೇ ಇದ್ದವು. ಇಂದಿಗೂ ನಾವು ಮೋಕ್ಷ, ಪುಣ್ಯ, ಪಾಪ ಮೊದಲಾದ ಆಡು ಭಾಷೆಯಲ್ಲಿ ಹೆಚ್ಚಾಗಿ ಉಪಯೋಗಿಸಲು ಪಡುವ ಪದಗಳನ್ನು ಸಂಸ್ಕೃತದಿಂದಲೇ ಸ್ವೀಕರಿಸಿದ್ದು ಭಾರತದ ಎಲ್ಲಾ ಭಾಷೆಗಳಿಗೆ ಮೂಲ ಸಂಸ್ಕ್ರತವೆಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಸಂಸ್ಕ್ರತ ಉಪನ್ಯಾಸಕ ವಾಗೀಶ ಶಾಸ್ತ್ರಿ ಹೇಳಿದರು.

ಸುರತ್ಕಲ್ ಗೋವಿಂದದಾಸ ಪದವಿ ಪೂರ್ವಕಾಲೇಜು ಮತ್ತು ಮಂಗಳೂರು ಸಂಸ್ಕೃತ ಸಂಘದ ಸಹಯೋಗದಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಜರಗಿದ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದು ವಿದ್ಯಾದಾನೀ ಸಂಘದ ಕಾರ್ಯದರ್ಶಿ ಶ್ರೀರಂಗ ಎಚ್ ವಹಿಸಿದ್ದರು ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ, ಉಪಪ್ರಾಂಶುಪಾಲೆ ಸುನೀತಾ ಕೆ,ಮಂಗಳೂರು ಸಂಸ್ಕೃತ ಸಂಘದ ಅಧ್ಯಕ್ಷ ರಮೇಶ ಆಚಾರ್ಯ, ಕಾರ್ಯದರ್ಶಿ ಸುರೇಖಾ ಉಪಸ್ಥಿತರಿದ್ದರು.ಕರ್ನಾಟಕ ಬ್ಯಾಂಕಿನ ಅಕಾರಿ ವಸಂತ ಹೇರಳೆ ಶುಭಾಶಂಸನೆಗೈದರು. ಕಾಲೇಜಿ ಸಂಸ್ಕ್ರತ ಶಿಕ್ಷಕ ಪೈಕ ವೆಂಕಟರಮಣ ಸ್ವಾಗತಿಸಿದರು.

ವಿದ್ಯಾದಾಯಿನಿ ಶಾಲೆಯ ಸಂಸ್ಕೃತ ಶಿಕ್ಷಕ ದಿವಸ್ಪತಿ ಕಾರ್ಯಕ್ರಮ ನಿರೂಪಿಸಿದರು.ಶಾರದಾ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕ ರಮೇಶ ಆಚಾರ್ಯ ವಂದಿಸಿದರು. ಪ್ರಾಥಮಿಕ ವಿದ್ಯಾರ್ಥಿಗಳಿಂದ ಪದವಿ ವಿದ್ಯಾರ್ಥಿಗಳವರೆಗೆ ಭಾಷಣ, ಸಂಸ್ಕೃತಕಥಾಕಥನ, ಸ್ತೋತ್ರ ಕಂಠಪಾಠ, ಸುಭಾತಕಂಠಪಾಠ, ಸಂಸ್ಕೃತಗೀತಗಾಯನ, ಸಂಸ್ಕೃತ ಸಮೂಹ ನೃತ್ಯ, ರಸಪ್ರಶ್ನೆ ಸ್ಪರ್ಧೆಗಳು ನಡೆಯಿತು.

Edited By : PublicNext Desk
Kshetra Samachara

Kshetra Samachara

30/08/2022 10:10 pm

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ