ಚೇಳೈರು:ತುಳುನಾಡಿನ ಇಂದಿನ ಅಭಿವೃದ್ಧಿಗೆ ನಮ್ಮ ಹಿರಿಯರ ದುಡಿಮೆ ಕಾರಣ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವಧ್ಯಕ್ಷ ರವಿಶಂಕರ್ ಮಿಜಾರು ಹೇಳಿದರು.
ಅವರು ಕೊಲ್ಯಜಾರಂತಾಯ ದೇವಸ್ಥಾನದ ಬಳಿ ವಿವೇಕಾನಂದ ಯುವಕ ಮಂಡಲ ಚೇಳೈರು ,ಗ್ರಾಮ ಪಂಚಾಯತ್ ಚೇಳೈರು ಮತ್ತು ಕೊಲ್ಯ ಶ್ರೀ ಜಾರಂತಾಯ ಧೂಮಾವತಿ ದೇವಸ್ಥಾನ ಚೇಳೈರು ಹಾಗೂ ಹಳೆ ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಚೇಳೈರು ಸಹಯೋಗದಲ್ಲಿ ನಡೆದ ಕೆಸರು ಗದ್ದೆ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಮಾತನಾಡಿದರು. ಚೇಳೈರು ಗ್ರಾ ಪಂ ಅಧ್ಯಕ್ಷೆ ಯಶೋದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ನಿತ್ಯಾನಂದ, ಕೊಲ್ಯ ಜಾರಂತಾಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿಪ್ರಸನ್ನ ಮಂಗಳೂರು, ಜಿ ಪಂ ಮಾಜೀ ಉಪಾಧ್ಯಕ್ಷೆ ಕಸ್ತೂರಿ ಪಂಜ,ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಮಧ್ಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ,ಕೆ.ಪಿ,ಸಿ,ಸಿ ಪ್ರಧಾನ ಕಾರ್ಯ ದರ್ಶಿ ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು.
ವೆಂಕಟೇಶ ಶೆಟ್ಟಿ ಸ್ವಾಗತಿಸಿ ದೀಪಕ್ ಅಮೀನ್ ಧನ್ಯವಾದ ಸಮರ್ಪಿಸಿ ಸುರೇಶ್ ಶೆಟ್ಟಿ ಮತ್ತು ದೀಪಕ್ ಚೇಳೈರು ಕಾರ್ಯ ಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಸಹಾಯಕರಿಗೆ ಹಾಗೂ ಎಸ್,ಎಸ್,ಎಲ್,ಸಿ ಮತ್ತು ಪಿ,ಯು,ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರನ್ನು ಅಭಿನಂದಿಸಲಾಯಿತು.
Kshetra Samachara
21/08/2022 08:33 pm