ಮುಲ್ಕಿ: ಗ್ರಾಮೀಣ ಪ್ರದೇಶದಲ್ಲಿ ರಕ್ತದಾನ ಶಿಬಿರ ಹಾಗೂ ಸಮಾಜ ಮುಖಿ ಚಿಂತನೆಯ ಕಳಕಳಿಯ ಕೆಲಸ ನಡೆಯಬೇಕಾಗಿದೆ ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಶಾಂತಿನಗದರ ಗುತ್ತಕಾಡಿನ ಕೆ ಜೆ. ಎಮ್ ಸಭಾಭವನದಲ್ಲಿ ಪಾಪ್ಯುಲರ್ ಫ್ರಂಟ್, ಬ್ಲಡ್ ಡೋನರ್ಸ್ ಫಾರಂ ಕಿನ್ನಿಗೋಳಿ , ಲಯನ್ಸ್ , ಲಿಯೋಕ್ಲಬ್ ಕಿನ್ನಿಗೋಳಿ ಹಾಗೂ ಶ್ರೀನಿವಾಸ ಆಸ್ಪತ್ರೆ ಮುಕ್ಕ ಇದರ ಸಹಭಾಗಿತ್ವದಲ್ಲಿ ಮರ್‌ಹೊಮ್ ಸಿದ್ದೀಕ್ ಎಫ್ ಗುತ್ತಕಾಡು ಸ್ಮರಣಾರ್ಥ ರಕ್ತದಾನ ಶಿಬಿರ ಹಾಗೂ ಕಿನ್ನಿಗೋಳಿ ನಂಬರ್‌ವನ್ ಕೇಂದ್ರದಿಂದ ಅಧಾರ್‌ತಿದ್ದುಪಡಿ ಹಾಗೂ ಆಯುಷ್ಮಾನ್ ಕಾರ್ಡ್ ನೊಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆ. ಜೆ. ಎಮ್ ಅಧ್ಯಕ್ಷ ಜೆ. ಎಚ್. ಅಬ್ದುಲ್ ಜಲೀಲ್ ಅಧ್ಯಕ್ಷತೆವಹಿಸಿದ್ದರು.ಕೆ. ಜೆ. ಎಮ್ ಖತೀಬರರಾದ ಉಮರುಲ್ ಫಾರೂಕ್ ಸಖಾಫಿ ದುವಾ ಪ್ರಾರ್ಥನೆಗೈದರು. ಬ್ಲಡ್ ಡೋನರ್ಸ್ ಫಾರಂ ಅದ್ಯಕ್ಷ ಟಿ. ಕೆ. ಅಬ್ದುಲ್ ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು.
ಇಲಿಯಾಸ್ ಬಜ್ಪೆ ಶಿಬಿರ ಉದ್ಘಾಟಿಸಿದರು. ಲಯನ್ಸ್ ಅಧ್ಯಕ್ಷ ಫ್ರಾನ್ಸಿಸ್ ಸೆರಾವೂ, ಗುತ್ತಿಗೆದಾರ ಟಿ. ಎ. ಹನೀಫ್, ಲಯನ್ಸ್ ಹಿಲ್ಡಾ ಡಿಸೋಜ, ಕಿನ್ನಿಗೋಳಿ ನಂ. ಎನ್ ಸಂಸ್ಥೆಯ ರೋಶನ್ ಕಿನ್ನಿಗೋಳಿ, ಎಮ್ ಇಬ್ರಾಹಿಂ , ಮುಸ್ತಾಫ್ ಕಲ್ಕೆರೆ, ರಫೀಕ್ ಕಿನ್ನಿಗೋಳಿ, ರಹೀಂ ಕಿನ್ನಿಗೋಳಿ, ಎಮ್ ಖಾದರ್, ನವಾಝ್ ಕಲ್ಕೆರೆ, ತಾಹಿರ್ ನಾಕಶ್, ಇಕ್ಬಾಲ್ ಚೊಟರಿಕೆ ಮತ್ತಿತರಿರು ಉಪಸ್ಥಿರಿದ್ದರು. ಬಳಿಕ ರಕ್ತದಾನ ಶಿಬಿರ ನಡೆಯಿತು
Kshetra Samachara
17/08/2022 07:58 pm