ಕಟೀಲು:ಆಟಿ ಊರು ಬಿಟ್ಟು ಪೇಟೆ ಸೇರಿದೆ. ಆಟಿಯಲ್ಲಿ ಒಂದೇ ದಿನ ಇರುವುದಲ್ಲ. ಮೂವತ್ತು ದಿನಕ್ಕೆ ಮೂವತ್ತು ಮದ್ದುಗಳಿದ್ದವು. ಈಗ ಸ್ಟಾರ್ ಲೆವೆಲ್ಲಿನ ಆಚರಣೆ ಆಗುತ್ತಿದೆ. ಅರವತ್ತು ಬಗೆಯ ತಿನಿಸು ಒಂದೇ ದಿನ ತಿಂದು ಹೊಟ್ಟೆ ಹಾಳು ಮಾಡಿಕೊಳ್ಳುವ ದಿನ ಬಂದಿದೆ. ಆಟಿ ಆಚರಣೆ ಅಂದರೆ ಮಾನಸಿಕ ದೈಹಿಕ ಚಿಕಿತ್ಸೆಯೂ ಹೌದು. ಅರ್ಥಪೂರ್ಣ ಆಚರಣೆಯನ್ನು ಮಾಡುವ ಪ್ರಯತ್ನಗಳಾಗಲಿ ಎಂದು ತುಳು ವಿದ್ವಾಂಸ ಡಾ. ವೈ, ಎನ್. ಶೆಟ್ಟಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ "ಬರುವುದ ಬಂಡಸಾಲೆಡ್ ಆಟಿದ ಅಜನೆ"
ಕಾರ‍್ಯಕ್ರಮದಲ್ಲಿ ಆಟಿಯ ದಿನಗಳು ಹಾಗೂ ತುಳು ಸಂಸ್ಕೃತಿಯ ಬಗ್ಗೆ ನಡೆದ ವಿಚಾರಗೋಷ್ಟಿಯಲ್ಲಿ ಮಾತನಾಡಿದರು.
ತುಳುನಾಡಿನ ಪ್ರಕಾರ ಬೇಸಿಗೆ ಮತ್ತು ಮಳೆಗಾಲ ಮಾತ್ರ ಇರುವುದು. ಏತ, ನೊಗ ನೇಗಿಲು ಹೀಗೆ ತುಳು ಸಂಸ್ಕೃತಿಯ ವಿಚಾರಗಳು ಕಣ್ಮರೆ ಆಗುತ್ತ ಆಗುತ್ತ ತುಳು ಪದಗಳೂ ಮರೆತುಹೋಗುತ್ತಿವೆ ಎಂದು ವೈ.ಎನ್. ಶೆಟ್ಟಿ ಹೇಳಿದರು.
ಕೆ.ಕೆ. ಪೇಜಾವರ ಮಾತನಾಡಿ, ತುಳು ಎದುರುಕಥೆಗಳು, ತುಳು ಜನಪದ ಕಥೆಗಳು, ಪದಗಳು ಮರೆಯಾಗುತ್ತಿದ್ದು, ಇವತ್ತಿನ ಮಕ್ಕಳಿಗೆ ತಿಳಿಸಬೇಕಾದ ಅಗತ್ಯ ಇದೆ. ತುಳು ಭಾಷೆ ಉಳಿಸಬೇಕಾದರೆ ನಮ್ಮ ಸಂಸ್ಕೃತಿಯ ಆಚರಣೆಗಳೂ ಅಗತ್ಯವಾಗಿವೆ. ಆಟಿಯ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳೇ ಹೆಚ್ಚಿವೆ ಎಂದರು. ಪ್ರತಿ ಗಾದೆಗಳ ಹಿಂದೆ ಸತ್ಯಾಂಶಗಳಿವೆ ಎಂದರು.ಸಾಯಿನಾಥ ಶೆಟ್ಟಿ ವಿಚಾರಗೋಷ್ಟಿಯನ್ನು ನಿರೂಪಿಸಿದರು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ದೀಪ ಬೆಳಗಿ, ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್‌ಕುಮಾರ ಶೆಟ್ಟಿ ತೆಂಬರೆ ಬಾರಿಸಿ ಉದ್ಘಾಟಿಸಿದರು. ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣಸೇರಿದಂತೆ ಮುಂತಾದವರಿದ್ದರು.
Kshetra Samachara
09/08/2022 10:34 pm