ಕಟೀಲು : ಸ್ವಾಭಿಮಾನದ ಬದುಕಿನಿಂದ ಬ್ರಾಹ್ಮಣರು ಗೌರವವನ್ನು ಉಳಿಸಿಕೊಳ್ಳುವಂತಾಗಿದೆ. ಗಾಯತ್ರೀ ಮಂತ್ರದ ಉಪಾಸನೆ, ಆಚಾರ, ತಪೋಬಲದ ಮೂಲಕ ಬ್ರಾಹ್ಮಣ್ಯವನ್ನು ಉಳಿಸಿಕೊಂಡು ಸಮಾಜಮುಖಿಯಾಗಬೇಕು ಎಂದು ವಿದ್ವಾನ್ ಪಂಜ ಭಾಸ್ಕರ ಭಟ್ ಹೇಳಿದರು.
ಅವರು ಕಟೀಲು ನಂದಿನಿ ಬ್ರಾಹ್ಮಣ ಸಭಾದ ಮಹಾಸಭೆ ಹಾಗೂ ವಾರ್ಷಿಕೋತ್ಸವದಲ್ಲಿ ಉಪನ್ಯಾಸ ನೀಡಿದರು.ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ಸಾಧನೆಗಳಿಂದ ಬ್ರಾಹ್ಮಣರು ಗುರುತಿಸಲ್ಪಟ್ಟಿದ್ದು, ಸಂಘಟನೆಯ ಅಗತ್ಯ ಇದೆ ಎಂದರು.
ಹಿರಿಯ ದಂಪತಿಗಳಾದ ಅಡುಗೆ ವೃತ್ತಿಯಲ್ಲಿ ತೊಡಗಿಸಿಕೊಂಡ ಎಕ್ಕಾರು ಸತ್ಯನಾರಾಯಣ ಹೊಳ್ಳ. ಎಕ್ಕಾರು ಭಜನಾ ಮಂದಿರದ ವೈ ಜಗದೀಶ ರಾವ್ , ಕಟೀಲು ದೇಗುಲದಲ್ಲಿ ದೇವಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ ರಾವ್ ದಂಪತಿಗಳನ್ನು ಸಂಮಾನಿಸಲಾಯಿತು.
ಗೋಪಾಲಕೃಷ್ಣ ಆಸ್ರಣ್ಣ, ಸಭಾದ ಅಧ್ಯಕ್ಷ ಡಾ. ಪದ್ಮನಾಭ ಭಟ್, ಉಪಾಧ್ಯಕ್ಷ ಕೊಡೆತ್ತೂರು ವೇದವ್ಯಾಸ ಉಡುಪ, ಕೋಶಾಧಿಕಾರಿ ಶ್ರೀಶ ಆಚಾರ್ಯ,ಮಹಿಳಾ ವಿಭಾಗದ ಜ್ಯೋತಿ ಉಡುಪ ಮತ್ತಿತರರಿದ್ದರು. ಗುರುಪ್ರಸಾದ ಭಟ್ ನಿರೂಪಿಸಿದರು.
ಸುಶ್ಮಿತಾ ಜಯಂತಿ ಬಹುಮಾನಿತರ ಪಟ್ಟಿ ವಾಚಿಸಿದರು. ಪ್ರಮೀಳಾ. ಸುಮಂಗಲಾ ಸಂಮಾನ ಪತ್ರ ವಾಚಿಸಿದರು. ಕೋರ್ಯಾರ್ ಸುಬ್ರಹ್ಮಣ್ಯ ಆಚಾರ್ ಸ್ವಾಗತಿಸಿದರು. ದೇವಿಪ್ರಕಾಶ್ ರಾವ್ ವಂದಿಸಿದರು.
Kshetra Samachara
07/08/2022 06:15 pm