ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಯುವಕ ಸಂಘ "ಆಟಿದ ನೆಂಪು" ಕಾರ್ಯಕ್ರಮರಿ. ತೋಕೂರು, ಮಹಿಳಾ ಮಂಡಲ ರಿ. ತೋಕೂರು ಮತ್ತು ರೋಟರಿ ಸಮುದಾಯ ದಳ ತೋಕೂರು ಸಂಯುಕ್ತ ಆಶ್ರಯದಲ್ಲಿ "ಆಟಿದ ನೆಂಪು" ಕಾರ್ಯಕ್ರಮ ಸಂಘದ ಸುವರ್ಣ ಸಭಾಭವನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಸಸಿಹಿತ್ಲು ಭಗವತೀ ದೇವಸ್ಥಾನದ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ವಾಮನ ಇಡ್ಯಾ ಮಾತನಾಡಿ ತುಳುವರ ಆಷಾಢ ಮಾಸದ ಆಚರಣೆ ಮತ್ತು ಮಹತ್ವವನ್ನು ತಿಳಿಸಿಕೊಟ್ಟರು.
ಯುವಕ ಸಂಘದ ಅಧ್ಯಕ್ಷ ಶೇಖರ್ ಶೆಟ್ಟಿಗಾರ್, ಮಹಿಳಾ ಮಂಡಲದ ಅಧ್ಯಕ್ಷೆ ಅನುಪಮಾ ರಾವ್, ರೋಟರಿ ಸಮುದಾಯ ದಳದ ಅಧ್ಯಕ್ಷ ವಾಮನ ದೇವಾಡಿಗ, ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಹರಿದಾಸ್ ಭಟ್ ಉಪಸ್ಥಿತರಿದ್ದರು.
ಅನುಪಮಾ ರಾವ್ ಸ್ವಾಗತಿಸಿದರು. ವಿನೋದ ಭಟ್ ನಿರೂಪಿಸಿದರು.
Kshetra Samachara
18/07/2022 09:24 am