ಸುರತ್ಕಲ್:ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ನೃತ್ಯ ಸಂಗೀತ ಹಾಗೂ ತಾಳವಾಧ್ಯ ಕಲೆಗಳನ್ನು ಅಭ್ಯಾಸ ಮಾಡಿದರೆ ಸಾಧಕರಾಗುವುದರಲ್ಲಿ ಸಂಶಯವಿಲ್ಲ ಎಂದು ಕ.ಸಾ.ಪ.ಮಾಜೀ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹೇಳಿದರು.
ಅವರು ಹಳೆಯಂಗಡಿ ಸಮೀಪದ ಖಂಡಿಗೆ ಚೇಳಾಯರು ನ ನಾಟ್ಯಂಜಲಿ ಕಲಾಮಂದಿರದಲ್ಲಿ ಆಯೋಜಿಸಿದ ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿಯ ನಾಟ್ಯ ಚಂದ್ರ ವರ್ಷ ಮಾಲಿಕೆ ಏಕವ್ಯಕ್ತಿ ನೃತ್ಯ ಪ್ರದರ್ಶನದ ಅಧ್ಯಕ್ಷ ಪೀಠದಿಂದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಿರಿಯ ಗುರುಗಳಾದ ಉಳ್ಳಾಲ ಶ್ರೀ ಮೋಹನ್ ಕುಮಾರರು ದೇವತಾ ಜ್ಯೋತಿ ಪ್ರಜ್ವಲನ ಮಾಡಿದರು ಕರ್ನಾಟಕ ಕಲಾಶ್ರೀ ರಾಜಶ್ರೀ ಉಳ್ಳಾಲರು ನೃತ್ಯ ಮಾಲಿಕೆಯನ್ನುo ಉದ್ಘಾಟಿಸಿದರು. ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಗಳಿಸಿದ ಹರಿಕೃಷ್ಣ ಪುನರೂರಿಗೆ ಸಂಸ್ಥೆಯಿಂದ ಗೌರವವನ್ನು ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಶ್ರೀ ನಾಟ್ಯಂಜಲಿಯ ನಿರ್ದೇಶಕ ಕೆ ಚಂದ್ರಶೇಖರನಾವಡ, ಕರ್ನಾಟಕ ಕಲಾಶ್ರೀ ಪಿ ಕಮಲಾಕ್ಷ ಆಚಾರ್, ಕೆ ಮನೋ ರಂಜನಿ ರಾವ್, ಸಂಸ್ಥೆಯ ಟ್ರಷ್ಟಿ ಸುಮನಾವಡ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ನೃತ್ಯ ಶಿಕ್ಷಕರ ಮಕ್ಕಳಾದ ಶುಕೀ ರಾವ್, ಅಭಿರಾಮ್ ಮುರಳಿಧರ್, ಪೂರ್ವಿಕೃಷ್ಣ, ಶೀಯಾ ರಾವ್, ಚಿನ್ಮಯಿ ಎಸ್ ರಾವ್, ಶ್ರೀಕರಿ ಕೆ, ಸಾಕ್ಷಿ ಎನ್ ಭಟ್, ವಿ ಡಾ ಮಹಿಮಾ ಎಮ್ ಪಣಿಕರ್, ಸೌಂದರ್ಯಕೆ, ವಿ ಡಾ ಅಕ್ಷಿ ಶೆಟ್ಟಿ ಹೀಗೆ ಹತ್ತು ಮಂದಿ ಕಲಾವಿದರಿಂದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನಡೆಯಿತು. ವಿದುಷಿ ಸುಮಂಗಲ ರತ್ನಾಕರ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
Kshetra Samachara
09/07/2022 02:31 pm