ಮುಲ್ಕಿ: ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಮಂತೂರಿನಲ್ಲಿ ನಿತ್ಯಾನಂದ ಸ್ವಾಮಿ( ಅವದೂತ ಗುರುಗಳು) ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಸ್ಥಳೀಯರಾದ ಸದಾಶಿವ ಶೆಟ್ಟಿ ಶಿಮಂತೂರು ರವರ ಬಹುದಿನದ ಸಂಕಲ್ಪದಂತೆ ಶಿಮಂತೂರಿನ ತನ್ನ ಸ್ವಂತ ಜಾಗದ ಸ್ಥಳವನ್ನು ಮಂದಿರ ನಿರ್ಮಾಣಕ್ಕೆ ದಾನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ಬಾಳಿಕೆ ರಾಮದಾಸ್ ಶೆಟ್ಟಿ, ಗುತ್ತಿಗೆದಾರರಾದ ನಿತಿನ್ ಶೆಟ್ಟಿ ಪಂಜಿನಡ್ಕ, ಅತಿಕಾರಿಬೆಟ್ಟು ಪಂಚಾಯತ್ ಅಧ್ಯಕ್ಷ ಮನೋಹರ ಕೋಟ್ಯಾನ್, ಶಿಮಂತೂರು ಆದಿಜನಾರ್ಧನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ವಿಠೋಭ ರುಕುಮಾಯಿ ಮಂದಿರದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಶ್ರೀಕಾಂತ್ ಭಟ್, ಸಂಜೀವ ಸುವರ್ಣ, ಶೀನ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.
Kshetra Samachara
07/07/2022 09:29 pm