ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲಕಾಡಿ:"ಭಕ್ತಿಯ ಮೂಲಕ ದೇವರ ಆರಾಧನೆ ಯಿಂದ ಸಕಲ ಕಾರ್ಯಗಳು ಸಿದ್ದಿ"

ಮುಲ್ಕಿ: ಆನೆಗುಂದಿ ಮಠದ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ಚಾತುರ್ಮಾಸದ ಪೂರ್ವಭಾವಿಯಾಗಿ ಕ್ಷೇತ್ರ ಸಂದರ್ಶನ ಪ್ರಯುಕ್ತ ಮುಲ್ಕಿ ಸಮೀಪದ ಕೊಲಕಾಡಿ ಶ್ರೀ ಕಾಳಿಕಾಂಬ ದೇವಸ್ಥಾನಕ್ಕೆ ಗುರುಗಳ ಕ್ಷೇತ್ರ ಸಂದರ್ಶನ ಕಾರ್ಯಕ್ರಮ ನಡೆಯಿತು.

ಕ್ಷೇತ್ರದ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ ಸ್ವಾಮೀಜಿಯವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.

ಈ ಸಂದರ್ಭ ಸ್ವಾಮೀಜಿಯವರು ಆಶೀರ್ವಚನ ನೀಡಿ ಭಕ್ತಿಯ ಮೂಲಕ ದೇವರ ಆರಾಧನೆ ಯಿಂದ ಸಕಲ ಕಾರ್ಯಗಳು ಸಿದ್ಧಿಯಾಗುತ್ತದೆ ಎಂದರು.

ದೇವಸ್ಥಾನದ ಮಾಜೀ ಮುಖ್ಯಸ್ಥ ಸುಬ್ರಯಾಚಾರ್ಯ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ,

ಜಗದೀಶ್ ಆಚಾರ್ಯ, ಸದಾಶಿವ ಆಚಾರ್ಯ, ಸುಧೀರ್ ಆಚಾರ್ಯ, ಕೆ ಉಮೇಶ್ ಆಚಾರ್ಯ, ದಿನೇಶ್ ಆಚಾರ್ಯ, ಸುಂದರ ಆಚಾರ್ಯ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/06/2022 07:59 am

Cinque Terre

1.52 K

Cinque Terre

0

ಸಂಬಂಧಿತ ಸುದ್ದಿ