ಮಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ
ಫಲಾನುಭವಿಗಳಾದ ಪರಶುರಾಮ ಮಡಿವಾಳಪ್ಪ ಬೈಕಂಪಾಡಿ, ಜ್ಯೋತಿ ಕುಂಜತ್ತಬೈಲ್, ನವೀನ್ ದೇವರ ಪದವು ವಾಮಂಜೂರು, ತಿರುವೈಲ್, ನಾಸೀರ್ ಆಶ್ರಯ ನಗರ ತಿರುವೈಲ್, ಉದಯ್ ದೇವಿನಗರ ಬೊಂದೆಲ್ ರವರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳ ಕೀ ಯನ್ನು ಶಾಸಕ ಡಾ. ಭರತ್ ಶೆಟ್ಟಿ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡೆ, ಯುವ ಸಬಲೀಕರಣ ಇಲಾಖೆಯಿಂದ ಕ್ರೀಡಾ ಸಾಮಗ್ರಿ ಖರೀದಿಗಾಗಿ ಯುವ ಸಂಘಗಳಿಗೆ ಕ್ರೀಡಾಕಿಟ್ ವಿತರಿಸಲಾಗುತ್ತಿದ್ದು ರಾಘವೇಂದ್ರ ಫ್ರೆಂಡ್ಸ್ ಕ್ರಿಕೆಟರ್ಸ್, ಕೊಳಪಿಲ, ಮೂಡುಪೆರಾರ, ಮಲ್ಲೂರು ಮಿತ್ರ ಯುವಕ ಸಂಘ, ಮಲ್ಲೂರು, ಶಿವಶಕ್ತಿ ಯುವಕ ಮಂಡಲ, ಕೊಳಂಬೆ, ಕಂದಾವರ ಯುವಕ ಮಂಡಲಗಳಿಗೆ ಶಾಸಕರು ಕ್ರೀಡಾಕಿಟ್ ವಿತರಿಸಿದರು. ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್ ಜೊತೆಗಿದ್ದರು.
Kshetra Samachara
27/06/2022 06:25 pm