ಮುಲ್ಕಿ: ಭಜನೆಯಿಂದ ಭಗವಂತನನ್ನು ಒಲಿಸಿಕೊಳ್ಳಬಹುದೆಂದು ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಗುತ್ತಿನಾರ್ ಉಮೇಶ್ ಶೆಟ್ಟಿ ಗುತ್ತಿನಾರ್ ಹೇಳಿದರು.
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ದ ವಿಶ್ವಕರ್ಮ ಭಜನಾ ಮಂಡಳಿಯ ವತಿಯಿಂದದಿತ್ಯವಾರದಂದು ಸೂರ್‍ಯೋದಯದಿಂದ ಸೂರ್‍ಯಾಸ್ತಮಾನದವರೆಗೆ ನಡೆದ ಭಜನಾ ಮಂಗಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅ`ಕ್ಷ ಎಸ್ ಯೋಗೀಶ್ ಆಚಾರ್ಯ ಮಾರಡ್ಕ, ಗೌರವಾಧ್ಯ್ಯಕ್ಷ ಕೆ. ಎಸ್. ಉಮೇಶ್ ಆಚಾರ್ಯ, ಸಭಾ ಭವನ ಸಮಿತಿಯ ಅಧ್ಯಕ್ಷ ಎಂ. ಪ್ರಥ್ವಿರಾಜ್ ಆಚಾರ್ಯ, ಕಾಳಿಕಾಂಬಾ ಮಹಿಳಾ ವೃಂದದ ಅಧ್ಯಕ್ಷೆ ಶಶಿಕಲಾ ಬಿ. ಜಿ ಆಚಾರ್ಯ, ಪುರೋಹಿತ್ ಯೋಗೀಶ್ ಆಚಾರ್ಯ ಬೆಳುವಾಯಿ, ಕಾರ್ಯದರ್ಶಿ ಅರವಿಂದ ಆಚಾರ್ಯ, ಪ್ರಭಾಕರ ಆಚಾರ್ಯ, ನವೀನ್ ಆಚಾರ್, ದಿನೇಶ್ ಆಚಾರ್ಯ, ಹರೀಶ್ ಆಚಾರ್ಯ, ಯೋಗೀಶ್ ಆಚಾರ್ಯ, ಸುಧಾಕರ ಆಚಾರ್ಯ ಮತ್ತಿತರರಿದ್ದರು.
Kshetra Samachara
19/06/2022 04:36 pm