ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಯೋಜನೆಗೆ ಪ್ರಾಮುಖ್ಯತೆ ನೀಡಲಾಗುತ್ತಿದ್ದು ನಾಗರಿಕರ ಸಹಕಾರ ಅಗತ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಸ್ವಚ್ಛ ಭಾರತ್ ಮೆಷಿನ್ ಯೋಜನೆಯಡಿ ಮುಲ್ಕಿ ನಗರ ಪಂಚಾಯತ್ ಗೆ ನೂತನವಾಗಿ ಮಂಜೂರಾದ 10 ಪುಲ್ಲಿಂಗ್ ಕಾರ್ಟ್ ಹಾಗೂ 2 ಗ್ರಾಸ್ ಕಟಿಂಗ್ ಮೆಷಿನ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈ ಸಂದರ್ಭ ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಪುತ್ತುಬಾವ, ಹರ್ಷರಾಜ ಶೆಟ್ಟಿ, ಮಂಡಲಾಧ್ಯಕ್ಷ ಸುನಿಲ್ ಆಳ್ವ, ಸಹಕಾರಿ ಪ್ರಕೋಷ್ಠದ ಸದಸ್ಯ ರಂಗನಾಥ ಶೆಟ್ಟಿ, ನರಸಿಂಹ ಪೂಜಾರಿ ಮುಖ್ಯಾಧಿಕಾರಿ ಚಂದ್ರಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
14/06/2022 01:25 pm