ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಉತ್ತಮ ಸಾಹಿತ್ಯ ಮತ್ತು ಹಾಸ್ಯ ಬರಹಗಳು ಮನುಷ್ಯನ ಆರೋಗ್ಯಕ್ಕೆ ಪೂರಕ

ಮುಲ್ಕಿ: ಉಡುಪಿ ಕಾಸರಗೋಡು ಜಿಲ್ಲೆ ಸಾಹಿತ ದಕ್ಷಿಣಕನ್ನಡಜಿಲ್ಲೆ ಮಕ್ಕಳ ಸಾಹಿತ್ಯ ಸಂಗಮ (ರಿ) ಮಂಗಳೂರಿನ ಸಾವಿತ್ರಿ ಮನೋಹರ್ ರವರ ಹಾಸ್ಯ ಕೃತಿ "ಆನ್ಲೈನ್ ಅವಾಂತರ" ಪುಸ್ತಕ ಅನಾವರಣ ಕಾರ್ಯಕ್ರಮ ಮುಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾದ ರಾಮಕೃಷ್ಣ ಬೆಳಾಲು ವಹಿಸಿದ್ದರು.

ನೂತನ ಪುಸ್ತಕ ಅನಾವರಣಗೊಳಿಸಿ ಕ ಸಾ ಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ

ಉತ್ತಮ ಸಾಹಿತ್ಯ ಮತ್ತು ಹಾಸ್ಯ ಬರಹಗಳು ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿದ್ದು ಪುಸ್ತಕಗಳನ್ನು ಕೊಂಡು ಓದಿ ಲೇಖಕರಿಗೆ ಪ್ರೋತ್ಸಾಹಿಸಿ ಎಂದರು.

ಮುಖ್ಯ ಅತಿಥಿಗಳಾಗಿ ಲೇಖಕಿ ಮನೋರಮಾ ಎಂ ಭಟ್, ಅತ್ರಾಡಿ ಸಂದೀಪ ಸಾಹಿತ್ಯ ದ ಇಂದಿರಾ ಹಾಲಂಬಿ, ನಿವೃತ್ತ ಶಿಕ್ಷಕಿ ಸಾವಿತ್ರಿ ಮನೋಹರ್ ಕಾರ್ಕಳ, ಖಜಾಂಚಿ ಕೆ. ಪಿ.ರಾವ್ , ಸಾಹಿತಿ ಡಾ. ಹರಿಶ್ಚಂದ್ರ ಪಿ.ಸಾಲ್ಯಾನ್, ನಿವೃತ್ತ ದಿಗಂತ ಪತ್ರಿಕೆ ಉಪಸಂಪಾದಕಿ ಅ.ನಾ. ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ಸಾವಿತ್ರಿ ರಮೇಶ್ ಭಟ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಹರಿಕೃಷ್ಣ ಪುನರೂರು ರವರನ್ನು ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ಗೌರವಿಸಲಾಯಿತು

Edited By : PublicNext Desk
Kshetra Samachara

Kshetra Samachara

11/06/2022 12:48 pm

Cinque Terre

2.35 K

Cinque Terre

0

ಸಂಬಂಧಿತ ಸುದ್ದಿ