ಮುಲ್ಕಿ: ಪುರಾತನ ಕಾಲದಿಂದಲೂ ಮಠ-ಮಂದಿರಗಳು ಶ್ರದ್ದಾ ಕೇಂದ್ರದ ಪ್ರತೀಕವಾಗಿದ್ದು ಭಕ್ತರಿಗೆ ಜ್ಞಾನಾರ್ಜನೆಯ ತಾಣವಾಗಿದೆ. ಮಠ-ಮಂದಿರಗಳಲ್ಲಿ ದೇವರ ಆರಾಧನೆ ಗ್ರಾಮದ ಅಭಿವೃದ್ಧಿಯ ಸಂಕೇತ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಉಡುಪಿ ಜಿಲ್ಲೆಯ ಪಲಿಮಾರು ಗ್ರಾಮದಲ್ಲಿರುವ ಶ್ರೀ ಹೃಷಿಕೇಶ ತೀರ್ಥ ಮೂಲ ಸಂಸ್ಥಾನ ಶ್ರೀ ಪಲಿಮಾರು ಮಠದ ಮೂಲ ದೇವರಾದ ಶ್ರೀರಾಮಚಂದ್ರ ಸನ್ನಿಧಿ, ಶ್ರೀಮುಖ್ಯಪ್ರಾಣ ಸನ್ನಿಧಿ ಹಾಗೂ ಶ್ರೀ ವಿದ್ಯಾಮಾನ್ಯರ ವೃಂದಾವನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್ ಭಟ್, ರಾಹುಲ್ ಸಿ ಭಟ್, ಸಂಚಾಲಕ ಪುನೀತ್ ರಾಜ್, ವೇ.ಮೂ. ಸುಬ್ರಮಣ್ಯ ಭಟ್, ಪ್ರಾಣೇಶ್ ಭಟ್ ದೇಂದಡ್ಕ, ನಂದಳಿಕೆ ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು.ಪ್ರಾಣೇಶ್ ಭಟ್ ಸ್ವಾಗತಿಸಿ ನಿರೂಪಿಸಿದರು.
Kshetra Samachara
03/06/2022 01:59 pm