ಮುಲ್ಕಿ:ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆಯೊಂದಿಗೆ ಮಾನವೀಯತೆ ಬೆಳೆಸಿಕೊಂಡ ವ್ಯಕ್ತಿಗಳನ್ನು ಜೀವನ ಪರ್ಯಂತ ಸಮಾಜ ಗುರುತಿಸಿ ಗೌರವಿಸುತ್ತದೆ ಎಂದು ಹಿರಿಯ ರಂಗಕರ್ಮಿ ಪರಮಾನಂದ ಸಾಲ್ಯಾನ್ ಸಸಿಹಿತ್ಲು ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ ಕಂಪ್ಯೂಟರ್ ವಿಭಾಗದಲ್ಲಿ ಸೇವೆ ನೀಡಿ ನಿವೃತ್ತರಾದ ಭಾಸ್ಕರ ಸಫಳಿಗ ರವರನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಸಾರ್ವಜನಿಕ ಹಿತೈಶಿಗಳಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಅಭಿನಂದನಾ ಮಾತುಗಳನ್ನಾಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಅಮೀನ್ ಮಟ್ಟು ಮಾತನಾಡಿದರು.
ಭಾರತೀಯ ಜೀವ ವಿಮಾ ನಿಗಮದ ಮುಲ್ಕಿ ಶಾಖಾ ಪ್ರಭಂದರಾದ ದುರ್ಗಾ ರಾಮ್ ಶೆಣೈ ಭಾಸ್ಕರ ಸಫಳಿಗರವರನ್ನು ಸಾರ್ವಜನಿಕ ಹಿತೈಶಿಗಳ ವತಿಯಿಂದ ಗೌರವಿಸಿದರು. ಈ ಸಂದರ್ಭ ರೋಟರಿಯ ಮಾಜಿ ಸಹಾಯಕ ಗವರ್ನರ್ ರವಿಚಂದ್ರ, ಕೆ.ರಮಾನಾಥ ಸುವರ್ಣ, ರಾಜೇಶ್ ಅಮೀನ್,ಉಮೇಶ್ ಬಡಗುಹಿತ್ಲು, ಸುಧಾ ಆಚಾರ್ಯ,ಸದಾನಂದ ಧರ್ಮಸಾನ,ನಿಗಮದ ಅಬಿವೃದ್ದಿ ಅಧಿಕಾರಿಗಳಾದ ಅರವಿಂದ್, ಪೂರ್ಣೇಶ್,ಮನ್ಸೂರ್ ಮತ್ತಿತರರಿದ್ದರು.
Kshetra Samachara
31/05/2022 01:05 pm