ಸೂರಿಂಜೆ: ಭಾರತವನ್ನು ಸಮೃದ್ದಗೊಳಿಸುವಲ್ಲಿ ಕಲಾ ಪ್ರಕಾರಗಳ ಕೊಡುಗೆ ಗಣನೀಯವಾದುದು.ಯಕ್ಷಗಾನ ಕಲೆಗೆ ಸಮಸ್ತ ಜಗತ್ತನ್ನೆ ಸುಧಾರಿಸುವ ದಿವ್ಯಶಕ್ತಿಯಿದೆ,ಯಕ್ಷಗಾನ ತುಳುನಾಡಿನ ಗಂಡುಕಲೆ ಯಾಗಿದ್ದು ಉಳಿಸಿ-ಬೆಳೆಸುವಲ್ಲಿ ನಾವು ಪ್ರಯತ್ನಿಸಬೇಕುಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ವಾಸುದೇವ ಅಸ್ರಣ್ಣ ಹೇಳಿದರು.
ಅವರು ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೊನ್ನಗಿರಿ ಯಕ್ಷಗಾನ ಸೇವಾ ಟ್ರಸ್ಟ್ ಕುತ್ತೆತ್ತೂರು ಸೂರಿಂಜೆ ವತಿಯಿಂದ ಜರುಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮಂಡಳಿಯ ರಜತ ಮಹೋತ್ಸವದ ಯಕ್ಷಗಾನ ಸೇವೆಯಾಟದ ಧಾರ್ಮಿಕ ಸಭಾ ಕಾರ್ಯ ಕ್ರಮದಲ್ಲಿ ಅಶಿರ್ವಚನ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ವಿಶ್ವೇಶ್ವರ ರಾವ್ ಕುತ್ತೆತ್ತೂರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ವೈ ಶೆಟ್ಟಿ ,ಪೊನ್ನಗಿರಿ ದೇವಸ್ಥಾನದ ತಂತ್ರಿ ವೇ.ಮೂ ವಿಜಯದಾಸ ಅಚಾರ್ಯ,ಸೂರಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜೀತೇಂದ್ರ ಶೆಟ್ಟಿ, ಪೊನ್ನಗಿರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಖೇಶ್ ಶೆಟ್ಟಿ ಬೈಲಗುತ್ತು, ಮತ್ತಿತರರು ಉಪಸ್ಥಿತರಿದ್ದರು
ಬೋಜರಾಜ್ ಶೆಟ್ಟಿ ಸೂರಿಂಜೆ ಸ್ವಾಗತಿಸಿ ಜಯಶೀಲ ಸೂರಿಂಜೆ ಧನ್ಯವಾದ ಸಮರ್ಪಿಸಿ ಜಯಪ್ರಕಾಶ್ ಸೂರಿಂಜೆ ಕಾರ್ಯ ಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ , ಪೊನ್ನಗಿರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ್ ಅಸ್ರಣ್ಣ , ಸಹಾಯಕ ಅರ್ಚಕ ಶ್ರೀಧರ್ ಭಟ್, ಮುಂಬೈ ಉದ್ಯಮಿ ಗಣೇಶ್ ರಾಮಣ್ಣ ಶೆಟ್ಟಿ ಕುಲ್ಲಂಗಾಲು ರವರನ್ನು ಗೌರವಿಸಲಾಯಿತು.
Kshetra Samachara
25/05/2022 08:28 pm