ಮುಲ್ಕಿ: ಸಾಮೂಹಿಕ ವಿವಾಹದಂತಹ ಉತ್ತಮ ಕಾರ್ಯಕ್ರಮಗಳನ್ನು ಧಾರ್ಮಿಕ ಕ್ಷೇತ್ರದಲ್ಲಿ ನಡೆಸುವ ಮೂಲಕ ಮಾದರಿಯಾಗಿದ್ದಾರೆ ಶಾಸಕ ಉಮನಾಥ ಕೋಟ್ಯಾನ್ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಾಹಮ್ಮಾಯೀ ದೇವಸ್ಥಾನ ಉಚಿತ ಸಾಮೂಹಿಕ ವಿವಾಹ ಹಾಗೂ ಪ್ರತಿಷ್ಠಾ ವರ್ದಂತಿ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಟೀಲು ದೇವಸ್ಥಾನದ ಅರ್ಚಕ ವೆ. ಮೂ. ಸದಾನಂದ ಆಸ್ರಣ್ಣ ಪಣಂಬೂರು ವಿಭಾಗದ ಎಸಿಪಿ ಮಹೇಶ್ ಕುಮಾರ್ ಎಸ್, ಮೂಲ್ಕಿ ಠಾಣಾಧಿಕಾರಿ ಕುಸುಮಾಧರ್ , ಉಡುಪಿ ಲೋಕಾಯುಕ್ತ ನಿರೀಕ್ಷಕ ಜಯರಾಮ ಗೌಡ, ಧರ್ಮದರ್ಶಿಡಾ| ಹರಿಕೃಷ್ಣ ಪುನರೂರು, ಡಾ| ವಿರಾರ್ ಶಂಕರ ಶೆಟ್ಟಿ ಬಳ್ಕುಂಜೆ ಗುತ್ತು , ಡಾ. ಕೃಷ್ಣ ಕುಮಾರ್ ಶೆಟ್ಟಿ ಮುಂಬಯಿ, ಕೆ. ಅರುಣ್ ಪೈ ಸುರತ್ಕಲ್ , ಪುಲ್ಲೋಡಿ ರಾಜೇಶ್ ಶೆಟ್ಟಿ , ಚೇತನ ಮೋಹನ್‌ದಾಸ್ , ಧನ್ಯ , ಜನಕರಾಜ್ ಮತ್ತಿತತರು ಉಪಸ್ಥಿತರಿದ್ದರು.
ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಶರತ್ ಕಾರ್ಯಕ್ರಮ ನಿರೂಪಿಸಿದರು.
ಶೇಖರ್- ಮಾ, ಗಣೇಶ್ ಪಾಣಾರ- ಶ್ರೀಕಾಂತಿ, ರಾಜೇಶ್ - ಪ್ರತಿಭಾ , ಹರೀಶ್ ಕುಮಾರ್ ಚಂದ್ರಿಕಾ, ಕಿಶೋರ್ ಯಾದವ್- ಶ್ರೀನಿಧಿ ಜೋಡಿಗಳಿಗೆ ವಿವಾಹ ನಡೆಯಿತು. ಪ್ರತಿಷ್ಠಾ ವರ್ದಂತಿಯ ಅಂಗವಾಗಿ ಚಂಡಿಕಾ ಹವನ , ಭಜನಾ ಕಾರ್ಯಕ್ರಮ , ಸಂಜೆ ದೈವಗಳಿಗೆ ನೇಮ ನಡೆಯಿತು.
Kshetra Samachara
22/05/2022 05:24 pm