ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಯಕ್ಷಗಾನದ ವಿದ್ವಾಂಸ ಗಣೇಶ್ ಕೊಲೆಕಾಡಿ ಯವರಿಗೆ 50,000 ರೂ. ಸಹಾಯ ಹಸ್ತ ನೀಡಲಾಯಿತು.
ತೀವ್ರ ಅನಾರೋಗ್ಯದಿಂದ ಬಳಲುತಿರುವ ಯಕ್ಷಗಾನದ ಪ್ರಸಂಗ ಕರ್ತ, ಛಂದೋವಾರಿಧಿ ಗಣೇಶ್ ಕೊಲೆಕಾಡಿ ಯವರನ್ನು ಫೌಂಢೇಶನ್ ನ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ,ಆರೋಗ್ಯವನ್ನು ವಿಚಾರಿಸಿ ಸಂತೈಸಿದರು. ತೀರಾ ಬಡತನದಲ್ಲಿರುವ ಕಲಾವಿದನಿಗೆ ಈ ಹಿಂದೆ ಅನೇಕ ಬಾರಿ ಫೌಂಢೇಶನ್ ಸ್ಪಂದಿಸಿದೆ ಹಾಗೂ ಕಳೆದ 5 ವರ್ಷಗಳಿಂದ ಇವರ ಚಿಕಿತ್ಸೆಯ ವೆಚ್ಚ ವಾಗಿ ಪ್ರತೀ ತಿಂಗಳು 1000 ರೂಪಾಯಿ ಮಾಸಾಶನ ನೀಡುತ್ತಾ ಬಂದಿದೆ.ಈ ಸಂದರ್ಭ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಮತ್ತು ಸಿಎ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು.
Kshetra Samachara
17/05/2022 09:18 pm