ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಎನ್‌ಎಸ್‌ಎಸ್ ಶಿಬಿರ ಸಮಾರೋಪ

ಮುಲ್ಕಿ:ಹಳೆಯಂಗಡಿ ನಾರಾಯಣ  ಸನಿಲ್ ಪದವೀಪೂರ್ವ ಕಾಲೇಜಿನಲ್ಲಿ ಒಂದು ವಾರಗಳ ಕಾಲ ನಡೆದ ಮಂಗಳೂರು ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಮೂರು ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಕಾರ‍್ಯಾಧ್ಯಕ್ಷ ಸುಧಾಕರ ಅಮೀನ್ ಮಾತನಾಡಿ ಬಸದಿಗಳು ಹಾಗೂ ಸಸಿಹಿತ್ಲು ಬೀಚ್, ಹಳೆಯಂಗಡಿ ಪರಿಸರದಲ್ಲಿ ಸ್ವಚ್ಛತೆ ಹೀಗೆ ಶಿಬಿರವನ್ನು ಅರ್ಥಪೂರ್ಣ ಮಾಡಿರುವ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಇಲ್ಲಿ ಸಿಕ್ಕ ಸ್ವಚ್ಛತೆಯ ಅನುಭವದ ಪಾಠ ಬದುಕಿನುದ್ದಕ್ಕೂ ಅನುಸರಿಸುವಂತಾಗಲಿ ಎಂದರು.

ಪ್ರಾಂಶುಪಾಲರಾದ ರಾಜಶೇಖರ ಹೆಬ್ಬಾರ್, ಬಲ್ಮಠ ಸರಕಾರಿ ಕಾಲೇಜಿನ ಪ್ರಾಚಾರ‍್ಯ ಡಾ. ಜಗದೀಶ ಬಾಳ, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ಕಾರ‍್ಯದರ್ಶಿ ಕೇಶವ ದೇವಾಡಿಗ, ಸದಸ್ಯರಾದ ಚಂದ್ರಿಕಾ, ಆನಂದ ಸುವರ್ಣ ಸಸಿಹಿತ್ಲು, ಶಿಬಿರಾಧಿಕಾರಿಗಳಾದ ಪ್ರೊ. ಅರುಣಾ ಕುಮಾರಿ, ಲೋಕನಾಥ್, ಶ್ಯಾಂಪ್ರಸಾದ್ ಮತ್ತಿತರರಿದ್ದರು. ಯೋಜನಾಧಿಕಾರಿ ಡಾ. ಶೇಷಪ್ಪ ಕೆ. ವಂದಿಸಿದರು. ವರ್ಷಾ ಮತ್ತು ಕಾವ್ಯ ನಿರೂಪಿಸಿದರು. 

Edited By : PublicNext Desk
Kshetra Samachara

Kshetra Samachara

17/05/2022 07:53 am

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ