ಮುಲ್ಕಿ: ಮುಲ್ಕಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಸಹಕಾರದಲ್ಲಿ ಮಕ್ಕಳ ಬೌದ್ದಿಕ ಬೆಳವಣಿಗೆಗಾಗಿ ಉಚಿತ ಬೇಸಿಗೆ ಶಿಬಿರ ಬಾಲ ವಿಕಾಸ ಶಿಬಿರ 2022ಕ್ಕೆ ಚಾಲನೆ ನೀಡಲಾಯಿತು
ಶಿಬಿರದ ಉದ್ಘಾಟನೆಯನ್ನು ಪುನರೂರು ಶ್ರೀ ವಿಶ್ವನಾಥ ದೇವಸ್ತಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಪುನರೂರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುನರೂರು ಪ್ರತಿಷ್ಥಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ಮಕ್ಕಳ ಸಂಸ್ಕಾರಯುತ ಶಿಕ್ಷಣ ಕ್ಕೆ ಶಿಬಿರಗಳು ಸಹಕಾರಿ ಎಂದರು.
ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಪ್ರಧಾನ ಅರ್ಚಕ ಶಶಾಂಕ ಮುಚ್ಚಿಂತಾಯ ಶುಭಾಶಂಸನೆಗೈದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ,ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸದಸ್ಯ ಮಾಧವ ಶೆಟ್ಟಿಗಾರ್,ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಸಂತೋಷ್ ದೇವಾಡಿಗ,ಪುನರೂರು ಪ್ರತಿಷ್ಥಾನದ ಗೌರವಾಧ್ಯಕ್ಷೆ ಎಚ್ ಕೆ ಉಷಾರಾಣಿ,ಅಧ್ಯಕ್ಷ ದೇವಪ್ರಸಾದ್ ಪುನರೂರು, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನವಿಕಾಸ ಸಮಿತಿಯ ಅಧ್ಯಕ್ಷ ದಾಮೋದರ ಶೆಟ್ಟಿ ಕೊಡೆತ್ತೂರು, ಸುರೇಶ್ ರಾವ್ ನೀರಳಿಕೆ, ಜೀವನ್ ಶೆಟ್ಟಿ ಅಂಗರಗುಡ್ಡೆ, ಉದ್ಯಮಿ ಪುರಂದರ ಶೆಟ್ಟಿಗಾರ್ ಮತ್ತಿತರರು ಉಪಸ್ತಿತರಿದ್ದರು. ಶಶಿಕರ ಕೆರೆಕಾಡು ಧನ್ಯವಾದ ಅರ್ಪಿಸಿದರು.
ಬಳಿಕ ಬಾಲವಿಕಾಸ ಶಿಬಿರ ನಡೆಯಿತು. ಮೇ15 ರ ಆದಿತ್ಯವಾರ ಮಧ್ಯಾಹ್ನ ಗಂಟೆಗೆ ಶಿಬಿರದ ಸಮಾರೋಪ ಸಮಾರಂದ ನಡೆಯಲಿದೆ.
Kshetra Samachara
08/05/2022 10:10 am