ಸುರತ್ಕಲ್:. ಸುರತ್ಕಲ್ ಅಂಚೆ ಮನೋರಂಜನಾ ಕೂಟದ ವತಿಯಿಂದ ಕುಳಾಯಿ, ಬಿಜೈ,ಕೊಡಿಯಾಲ್ ಬೈಲ್ ಹಾಗೂ ಸುರತ್ಕಲ್ ನ ಅಂಚೆ ಇಲಾಖೆ ಯಲ್ಲಿ ಸುಮಾರು 38 ವರ್ಷಗಳ ಕಾಲ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾದ ಗೋಪಾಲ್ ಕೆ, ಹಾಗೂ ಕೃಷ್ಣಾಪುರ ಬ್ರಾಂಚ್ ಅಂಚೆ ಕಚೇರಿಯಲ್ಲಿ ಸುಮಾರು 33 ವರ್ಷ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾದ ಕೆ ಎಸ್ ಉಷಾ ರವರ ವಿದಾಯ ಸಮಾರಂಭವು ಸುರತ್ಕಲ್ ಅಂಚೆ ಕಛೇರಿಯ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಚೆ ಪಾಲಕ ಚಂದ್ರಶೇಖರ್ ಶೆಟ್ಟಿ ವಹಿಸಿ ಮಾತನಾಡಿ ಜೀವನದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರನ್ನು ಜನ ಗುರುತಿಸಿ ಗೌರವಿಸುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಅಂಚೆ ವಿಭಾಗದ ಉಪ ಅಂಚೆ ಅಧೀಕ್ಷಕ ಶ್ರೀನಾಥ್ ಬಸ್ರೂರು, ಮಂಗಳೂರು ಅಂಚೆ ಉತ್ತರ ವಿಭಾಗದ ನಿರೀಕ್ಷಕ ಮೆಲ್ವಿನ್ ಪಿಂಟೋ ಉಪಸ್ಥಿತರಿದ್ದರು.
ಚಂದ್ರಶೇಖರ್ ದೇವಾಡಿಗ ನಿರೂಪಿದರು.ವಸುಮತಿ ಶೆಟ್ಟಿಗಾರ್ ರವರು ವಂದಿಸಿದರು.
Kshetra Samachara
07/05/2022 12:43 pm