ಮುಲ್ಕಿ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ಆಶ್ರಯದಲ್ಲಿ ಪುನರೂರು ಟೂರಿಸ್ಟ್ ಹೋಮ್ ನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನ ದಿನಾಚರಣೆ ನಡೆಯಿತು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತು ಸದಸ್ಯ ಮೋಹನದಾಸ ಸುರತ್ಕಲ್ ರವರು ಸಂಸ್ಥಾಪನಾ ದಿನಾಚರಣೆ ಬಗ್ಗೆ ಉಪನ್ಯಾಸ ನೀಡಿ 107 ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ವನ್ನು ಉಳಿಸಿ ಬೆಳೆಸಿದ ಕವಿಗಳನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ಮುಂದಿನ ದಿನಗಳಲ್ಲಿ ಕನ್ನಡವನ್ನು ಮತ್ತಷ್ಟು ಉಳಿಸಿ ಬೆಳೆಸುವುದು ನಮ್ಮೆಲ್ಲರ ಪ್ರತಿಜ್ಞೆಯಾಗಲಿ ಎಂದರು.
ಇದೇ ಸಂದರ್ಭದಲ್ಲಿ ಖ್ಯಾತ ಸಂಶೋಧಕ ಡಾ|ಕೆ ಜೆ ವಸಂತ ಮಾಧವ- ವಿನೋದ ದಂಪತಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ಗಾಯತ್ರಿ ಎಸ್ ಉಡುಪ ವಹಿಸಿದ್ದರು.
ವೇದಿಕೆಯಲ್ಲಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜೊಸ್ಸಿ ಪಿಂಟೊ,ಮುಲ್ಕಿ ತಾಲ್ಲೂಕ ಕ.ಸಾ.ಪಾ ಘಟಕದ ಸದಸ್ಯರಾದ ವೆಂಕಟೇಶ ಹೆಬ್ಬಾರ್, ಉದಯ ಅಮೀನ್, ಅಬ್ದುಲ್ ರಜಾಕ್ , ಸ್ವರಾಜ್ ಶೆಟ್ಟಿ ಕಿನ್ನಿಗೋಳಿ, ವೀಣಾ ಶಶಿಧರ್, ಪ್ರತಿಭಾ ಹೆಬ್ಬಾರ್, ಎಂಆರ್ಪಿಎಲ್ ನ ರುಡಾಲ್ಫ್ ನೊರೋಹ್ನ, ಮಾಧವ ಕೆರೆಕಾಡು, ಸಾಧು ಅಂಚನ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.
ಸಂಗೀತ ವಿದ್ವಾನ್ ಆದರ್ಶ ಎಸ್,ಕೆ ಪ್ರಣವ್ ಶರ್ಮ ಕನ್ನಡ ಪದ್ಯಗಳನ್ನು ಹಾಡಿದರು. ಅಬ್ದುಲ್ ರಝಾಕ್ ಧನ್ಯವಾದ ಅರ್ಪಿಸಿದರು.
Kshetra Samachara
05/05/2022 08:06 pm