ಮುಲ್ಕಿ: ಕನ್ನಡ ಭಾಷೆಯ ಬಗ್ಗೆ ಭಾಷಣ,ಘೋಷಣೆಗಳನ್ನು ಮಾಡುವ ಬದಲಿಗೆ ಕನ್ನಡ ಶಾಲೆಯನ್ನು ಉಳಿಸಲು ಪ್ರಯತ್ನಿಸಬೇಕು.ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಕನ್ನಡ ನಾಡು ನುಡಿಯ ಅನುಪಮ ಸೇವಕ, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಹೇಳಿದರು.
ಯುಗಪುರುಷ ಕಿನ್ನಿಗೋಳಿ ಮತ್ತು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ಜರಗಿದ "ಕರಾವಳಿ ಕಾವ್ಯ ಸಂಭ್ರಮ"ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಕೆ ಭುವನಾಭಿರಾಮ ಉಡುಪ ವಹಿಸಿದ್ದರು.
ಕಾವ್ಯ ಸಂಭ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ ಆರ್ ವಾಸುದೇವ ಮಾತನಾಡಿ ಕವನ ಬರೆಯುವವರು ಅಧ್ಯಯ,ಓದು, ಅನುಭವಗಳಿಂದ ಪರಿಪಕ್ವವಾದಾಗ ಕವನಗಳು ಸತ್ವಯುತವಾಗುತ್ತದೆ ಎಂದು ಹೇಳಿದರು.
ಉದ್ಘಾಟನಾ ಕವಿತೆಯನ್ನು ಮರವಂತೆ ಪ್ರಕಾಶ್ ಪಡಿಯಾರ್ ವಾಚಿಸಿದರು.ಕೆ ವಿ ಪ್ರದೀಪ್ ಕುಮಾರ್ ಮಂಗಳೂರು,ದೊಡ್ಡಣ್ಣ ಶೆಟ್ಟಿ ಕವತ್ತಾರು ,ವಾಯ್ಸ್ ಆಫ್ ಆರಾಧನಾದ ಪದ್ಮಶ್ರೀ ನಿಡ್ಡೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ,ಸಾಹಿತಿ ದಯಾಮಣಿ ಎಕ್ಕಾರು,ವ್ಯೆದ್ಯ,ಸಾಹಿತಿ ಡಾ|ಸುರೇಶ ನೆಗಳಗುಳಿ,ತುಳುವರ್ಲ್ದ್ ಮಂಗಳೂರಿನ ಅಧ್ಯಕ್ಷ ಡಾ|ರಾಜೇಶ್ ಆಳ್ವ,ಶಿಕ್ಷಕಿ,ಕವಿ ಶಾಂತಾ ಪುತ್ತೂರು,ಮಕ್ಕಳ ಸಾಹಿತಿ ಡಾ|ತಯಬಅಲಿ ಹೊಂಬಾಳ,ಸಮಾಜ ಸೇವಕ ಪೆರ್ಮುಂಡೆ, ಶಂಕರ್ ಆರ್ ಹೆಗ್ಡೆ,ಕೊಂಬು ಕಲಾವಿದ ಕವತ್ತಾರು ರಾಘು ದೇವಾಡಿಗ,ಹಿರಿಯ ಕವಿ ಸೋಮಪ್ಪ ದೇವಾಡಿಗ ಪರ್ಕಳ ಮತ್ತು ಕಮ್ಮಜೆ ನೇಕಾರ ಕಾಲೋನಿಯ ಶ್ರೀ ದುರ್ಗಾ ಭಜನಾ ಮಂಡಳಿಯ ಭಜನಾ ತಂಡಕ್ಕೆ ಯುಗಪುರುಷ ಪ್ರಶಸ್ತಿ-2022 ನೀಡಿ ಗೌರವಿಸಲಾಯಿತು.
ಟಾರೆಸ್ ಗಾರ್ಡನ್ ಕೃಷಿ ಖ್ಯಾತಿಯ ಕೃಷ್ಣ ಪಡ್ಡಂಬೈಲು,ಜಯಪಾಲ ಶೆಟ್ಟಿ ಐಕಳ ,ಗೌರವ ಡಾಕ್ಟರೇಟ್ ಪುರಸ್ಕೃತ ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರನ್ನು ಗೌರವಿಸಲಾಯಿತು.
ಬಾಲ ಪ್ರತಿಭೆಗಳಾದ ಲಾಲಿತ್ಯ ಕುಮಾರ್ ಬೇಳೂರು,ಅರ್ಚನಾ ಎಸ್ ಸಂಪ್ಯಾಡಿ,ಶ್ರವಣ್ ಕಡಬ,ವಿಟ್ಲ,ನಿರೀಕ್ಷಾ ವಿಟ್ಲ,ಸಾನಿಧ್ಯ ಕವತ್ತಾರು, ಸುನಿತ ಅಜೆಕಾರು ಉತ್ತಮ ಪ್ರದರ್ಶನ ನೀಡಿ ಯುಗಪುರುಷ ಬಾಲ ಪ್ರತಿಭಾ ಗೌರವ ಸ್ವೀಕರಿಸಿದರು. ಡಾ|ವಾಣಿ ಗಿರೀಶ್ ಕಾಸರಗೋಡು,ತೇಜ ಎಸ್ ಬಿ ಚನ್ನ ಪಟ್ಟಣ,ನಾಗಶ್ರೀ ನಾಗರಕಟ್ಟೆ,ಕುಲಾಲ್ ಕಡ್ತಲ ಸೌಮ್ಯ ಗೋಪಾಲ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಹಲವಾರು ಕವಿಗಳು ಭಾಗವಹಿಸಿದ್ದರು.
ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರಾಜ್ಯಾಧ್ಯಕ್ಷ ಡಾ|ಶೇಖರ್ ಅಜೆಕಾರು ಸ್ವಾಗತಿಸಿ, ಪ್ರಸ್ತಾವನೆಗೈದರು,ರಾಮಕೃಷ್ಣ ಶಿರೂರು ವಂದಿಸಿದರು,ಬಿಂದು ಕೆ ಎ ಮತ್ತು ರೇಶ್ಮಾ ಶೆಟ್ಟಿ ನಿರೂಪಿಸಿದರು.
Kshetra Samachara
02/05/2022 06:19 pm